ಲೋಕಸಭೆಯ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೂ ಮುನ್ನ ಭಾರತೀಯ ಜನತಾ ಪಕ್ಷ ಇಂಡಿಯಾ(I.N.D.I.A) ಮೈತ್ರಿಕೂಟದ ವಿರುದ್ಧ ವಿಡಿಯೋ ಬಿಡುಗಡೆ ಮಾಡಿದ್ದು, ಹೆಸರು ಬದಲಾಯಿಸುವುದರಿಂದ ಕಾರ್ಯ ವೈಖರಿ ಬದಲಾಗದು ಎಂದು ಶೀರ್ಷಿಕೆ ನೀಡಿದ್ದಾರೆ.
ವಿಡಿಯೋ ಅಂತ್ಯದಲ್ಲಿ ಈ ವಿಡಿಯೋಗೂ ಯುಪಿಎಗೂ ಇಂಡಿಯಾ ಮೈತ್ರಿಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಬರೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಶಾಲೆಯ ತರಗತಿಯ ದೃಶ್ಯವೊಂದನ್ನು ತೋರಿಸಲಾಗಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಯಲ್ಲಿ 100 ಕ್ಕೆ ಶೂನ್ಯ ಅಂಕ ಬಂದಿರುತ್ತದೆ, ಮನೆಗೆ ಹೋಗಿ ತಾಯಿಯ ಬಳಿ ಇದನ್ನು ಹೇಳಿದಾಗ ಒಂದು ಕೆಲಸ ಮಾಡೋಣ ನಿನ್ನ ಹೆಸರನ್ನೇ ಬದಲಾಯಿಸೋಣ ಎಂದು ಹೇಳುತ್ತಾರೆ.
ಆಗ ವಿದ್ಯಾರ್ಥಿ ತಾನು 100 ಕ್ಕೆ 100 ಅಂಕ ಗಳಿಸಿರುವಂತೆ ಕನಸು ಕಾಣುತ್ತಾನೆ ಆಗ ಶಿಕ್ಷಕರು ಆತನನ್ನು ಎಚ್ಚರಿಸುತ್ತಾರೆ, ಆಗ ಉತ್ತರ ಪತ್ರಿಕೆಯಲ್ಲಿ 100ಕ್ಕೆ ಶೂನ್ಯ ಅಂಕವೇ ಇರುತ್ತದೆ. ಹೀಗಾಗಿ ಹೆಸರು ಬದಲಾಯಿಸುವುದರಿಂದ ಕಲಿಕೆಯಲ್ಲಿ ವ್ಯತ್ಯಾಸವೇನು ಆಗಿಲ್ಲ ಎಂಬುದರ ಬಗ್ಗೆ ಹೇಳಲಾಗಿದೆ.