ಮನೆ ರಾಷ್ಟ್ರೀಯ ಬಿಜೆಪಿ ನಿತೀಶ್ ಕುಮಾರ್​ಗೆ ಸಿಎಂ ಸ್ಥಾನ ಕೊಡೋದಿಲ್ಲ – ಖರ್ಗೆ ಟೀಕೆ

ಬಿಜೆಪಿ ನಿತೀಶ್ ಕುಮಾರ್​ಗೆ ಸಿಎಂ ಸ್ಥಾನ ಕೊಡೋದಿಲ್ಲ – ಖರ್ಗೆ ಟೀಕೆ

0

ಪಾಟ್ನಾ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಕ್ಕಾಗಿ ಬಿಜೆಪಿಗೆ ಶರಣಾಗಿದ್ದಾರೆ. ಸಿಎಂ ಆಗುವ ಆಸೆಯಿಂದ ಅವರು ಬಿಜೆಪಿಯ ತೊಡೆ ಮೇಲೆ ಹತ್ತಿ ಕುಳಿತಿದ್ದಾರೆ.

ಆದರೆ, ಬಿಜೆಪಿ ಖಂಡಿತವಾಗಿಯೂ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ. ತಮ್ಮ ಚೇಲಾಗೆ ಸಿಎಂ ಹುದ್ದೆಯನ್ನು ನೀಡುತ್ತದೆಯೇ ವಿನಃ ನಿತೀಶ್ ಕುಮಾರ್ ಅವರಿಗೆ ಆ ಸ್ಥಾನ ನೀಡುವುದಿಲ್ಲ. ಅದೇ ಕಾರಣಕ್ಕೆ ಬಿಜೆಪಿಯ ಪ್ರಚಾರ, ರೋಡ್ ಶೋಗಳೆಲ್ಲೂ ನಿತೀಶ್ ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ನಿತೀಶ್ ಕುಮಾರ್ ಮಹಿಳೆಯರ ಖಾತೆಗಳಿಗೆ 10,000 ರೂ.ಗಳನ್ನು ಜಮಾ ಮಾಡಿದ್ದಾರೆ. ಇದರಿಂದ ತಮಗೆ ಮತಗಳು ಸಿಗುತ್ತವೆ ಎಂದು ಅವರು ಭಾವಿಸಿದ್ದಾರೆ. ಬಿಹಾರದ ಜನರು ಬುದ್ಧಿವಂತರು. 10,000 ರೂ.ಗಳಲ್ಲ ನೀವು 10 ಲಕ್ಷ ರೂ.ಗಳನ್ನು ಜಮಾ ಮಾಡಿದರೂ ಸಹ ಅವರು ಯೋಚನೆ ಮಾಡಿಯೇ ಮತ ಹಾಕುತ್ತಾರೆ.

ಮಹಿಳೆಯರಿಗೆ 10,000 ರೂಪಾಯಿಗಳನ್ನು ನೀಡುವ ಬಗ್ಗೆ ಕಳೆದ 20 ವರ್ಷಗಳ ಕಾಲ ಅವರ ಮನಸ್ಸಿನಲ್ಲಿ ಬರಲಿಲ್ಲವೇ? 11 ವರ್ಷಗಳ ಕಾಲ ಅಧಿಕಾರ ನಡೆಸಿದ ಪ್ರಧಾನಿ ಮೋದಿಯವರ ಮನಸ್ಸಿನಲ್ಲಿಯೂ ಆ ವಿಷಯ ಬರಲಿಲ್ಲವೇ? ಇವೆಲ್ಲವೂ ಚುನಾವಣಾ ಭರವಸೆಗಳಷ್ಟೆ. ಪ್ರಧಾನಿ ಮೋದಿ ಮತ್ತು ಅವರ ಸ್ನೇಹಿತ ನಿತೀಶ್ ಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.