ಮನೆ ರಾಜ್ಯ ದತ್ತ ಜಯಂತಿ ಫ್ಲೆಕ್ಸ್‌ಗೆ ಬ್ಲೇಡ್ – ಪ್ರಕರಣ ದಾಖಲು

ದತ್ತ ಜಯಂತಿ ಫ್ಲೆಕ್ಸ್‌ಗೆ ಬ್ಲೇಡ್ – ಪ್ರಕರಣ ದಾಖಲು

0

ಚಿಕ್ಕಮಗಳೂರು : ದತ್ತ ಜಯಂತಿ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಬ್ಲೇಡ್‍ನಿಂದ ಕತ್ತರಿಸಿರುವ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಐಜಿ ರಸ್ತೆಯ ಉರ್ದು ಶಾಲೆ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಫ್ಲೆಕ್ಸ್ ಅಳವಡಿಸಿದ್ದರು. ಈ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ದತ್ತಪೀಠದಲ್ಲಿ ಡಿಸೆಂಬರ್ 2 ರಿಂದ 4ರ ವರೆಗೆ ದತ್ತ ಜಯಂತಿ ನಡೆಯಲಿದೆ.