ಮನೆ ರಾಷ್ಟ್ರೀಯ ವಾಯವ್ಯ ದೆಹಲಿಯಲ್ಲಿ ಸ್ಫೋಟ: ಸ್ಥಳಕ್ಕೆ ಧಾವಿಸಿದ ಎನ್‌ ಎಸ್‌ ಜಿ

ವಾಯವ್ಯ ದೆಹಲಿಯಲ್ಲಿ ಸ್ಫೋಟ: ಸ್ಥಳಕ್ಕೆ ಧಾವಿಸಿದ ಎನ್‌ ಎಸ್‌ ಜಿ

0

ನವದೆಹಲಿ: ವಾಯವ್ಯ ದೆಹಲಿಯ ಸಿಹಿತಿಂಡಿ ಅಂಗಡಿಯೊಂದರ ಹೊರಗಡೆ ಇಂದು (ಗುರುವಾರ) ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

Join Our Whatsapp Group

ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಟಿ.ವಿ.ಚಾನೆಲ್‌ಗಳು ವರದಿ ಮಾಡಿವೆ.

ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳದಿಂದ ‘ಬಿಳಿ ಪುಡಿ’ ಸಂಗ್ರಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿರುವ ಎನ್‌ ಎಸ್‌ ಜಿ ಕಮಾಂಡೊಗಳು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ದೆಹಲಿ ಪೊಲೀಸ್ ಅಪರಾಧ ದಳ, ಬಾಂಬ್ ನಿಷ್ಕ್ರಿಯ ದಳ ಕೂಡ ಪರಿಶೀಲನೆ ನಡೆಸುತ್ತಿದೆ.