ತೀವ್ರತರ ಚಿಕಿತ್ಸೆ
- ★ಮೆದುಳಿನಲ್ಲಿ ರಕ್ತಸ್ರಾವ ಮೆಡಿಕಲ್ ತುರ್ತು ಚಿಕಿತ್ಸೆ (ಎಮರ್ಜೆನ್ಸಿ) ಆಗಿರುತ್ತದೆ! ಈ ಲಕ್ಷಣಗಳು ಕಂಡು ಬಂದರೆ, ಅವರನ್ನು ತಕ್ಷಣ ಸುಸಜ್ಜಿತ ಆಸ್ಪತ್ರೆಗೆ ಸೇರಿಸಿ.
- ★ಮೆದುಳಿನ ಅಂತರ್ಗತ ರಕ್ತಸ್ರಾವಕ್ಕೆ ತಕ್ಷಣವೇ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬದುಕುವುದು ಕಡಿಮೆ.
- ★ಉಬ್ಬುವುದರಿಂದ (ಅನ್ಯೂರಿಜಂ) ರಕ್ತಸ್ರಾವವಾಗಿದ್ದರೆ ಕ್ಲಿಪಿಂಗ್ ಎನ್ನುವ ಶಸ್ತ್ರಕ್ರಿಯೆ ಮೂಲಕ ಸಕ್ರಮಗೊಳಿಸುತ್ತಾರೆ. ಬಿ.ಪಿ, ಕೊಲೆಸ್ಟ್ರಾಲ್ ನಂತವು ಈ ರೀತಿ ರಕ್ತಸ್ರಾವಕ್ಕೆ ಮೂಲಕಾರಣಗಳು. ಅದಕ್ಕೆ ತುಪ್ಪು, ಎಣ್ಣೆ, ಕೆನೆ, ಡಾಲ್ಡ ಇಂತಹವುಗಳನ್ನು ಪೂರ್ಣವಾಗಿ ವರ್ಜಿಸಬೇಕು. ಕೊಲೆಸ್ಟ್ರಾಲ್ ಕಡಿಮೆ ಮಾಡುವ, ರಕ್ತದೊತ್ತಡವನ್ನು ಕಡಿಮೆ ಮಾಡುವ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.
- ★ಸೋಮಾರಿತನ ಬಿಟ್ಟು ಶ್ರಮವಹಿಸಿ ಕೆಲಸ ಮಾಡಬೇಕು ಹಗುರವಾದ ವ್ಯಾಯಾಮ ಪ್ರಶಾಂತವಾಗಿ ಕೆಲಸದಲ್ಲಿ ನಿರಂತವಾಗಿರಬೇಕು ಮಾನಸಿಕ ಧೈರ್ಯ ತೆಗೆದುಕೊಂಡು ಸಾಧ್ಯವಾದಷ್ಟು ನಡಿಗೆ ಮಾಡಬೇಕು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರವನ್ನು ತೆಗೆದುಕೊಳ್ಳಬೇಕು. ಪರಿಹಾರಗಳು* ತರಕಾರಿಗಳಿಂದ : ಅಗಸೆಯ ಎಳೆಕಾಯಿಯಿಂದ ಪಲ್ಯಮಾಡಿ ಉಪಯೋಗಿಸಿದರೆ ಮಿದುಳಿನಲ್ಲಿರುವ ರಕ್ತನಾಳಗಳ ತೊಡಕನ್ನು ನಿವಾರಿಸುತ್ತದೆ. ಬಾದಾಮಿ – ಇದರ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಬೆಳಿಗ್ಗೆ ಮಕ್ಕಳಿಗೆ ನೀಡಿದರೆ ಮಕ್ಕಳಿಗೆ ಸ್ಮರಣ ಶಕ್ತಿ ಹೆಚ್ಚುತ್ತದೆ. ಲಜ್ಜವತಿ ಮುಟ್ಟಿದರೆ ಮುನಿ ರಕ್ತ ಹೆಪ್ಪುಗಟ್ಟಿವಿಕೆ ರಕ್ತಸ್ರಾವ ಮತ್ತು ಮನೋವಿಕಾರಗಳನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕರಿಯಾಗಿ ಕೆಲಸ ಮಾಡುತ್ತದೆ. ಈ ಗಿಡದ ಬೇರು ಅಥವಾ ಎಲೆಯನ್ನು ನೀರಿನಲ್ಲಿ ಕುದಿಸಿ, ಆರಿಸಿದ ನೀರನ್ನು ಕುಡಿಯುವುದರಿಂದ ರಕ್ತ ಶುದ್ದಿಯಾಗುತ್ತದೆ. ರಕ್ತನಾಳಗಳ ಸಮಸ್ಯೆ (ವೆರಿಕೋಸ್ ವೇಯನ್ಸ್) :
ವಿಟಾಮಿನ್ ‘ಇ’ ದೇಹದಲ್ಲಿ ಕಡಿಮೆಯಾದಾಗ ರಕ್ತಗಡ್ಡೆ ಕಟ್ಟಿ ಅಲ್ಲಿನ ನರಗಳು ಸಿಕ್ಕಿನಂತೆ ಹೆಣೆಳೆದುಕೊಂಡು, ಆ ನರಗಳು ಮೇಲಕ್ಕೆ ಉಬ್ಬಿ ಕಾಣಿಸಿಕೊಳ್ಳುತ್ತದೆ. ರಕ್ತನಾಳವನ್ನು ಸರಿಪಡಿಸಿ ರಕ್ತ ಸರಳವಾಗಿ ಹರಿಯಲು ‘ಇ’ ವಿಟಾಮಿನ್ ಬಳಸಿ ಚಿಕಿತ್ಸೆ ನೀಡುತ್ತಾರೆ. ನಿರಂತರವಾಗಿ ತೆಗೆದುಕೊಳ್ಳುತ್ತಿದೆ ಬೆಕ್ಕು ಹಸಿರು ಸೊಪ್ಪು, ಹಸಿರು ನಾರಿನ ಸೊಪ್ಪು ಕಾಟನ್ ಸೀಡ್ಸ್ ಸನ್‌ಫ್ಲವರ್ ಆಯಲ್, ಅನಾನಸ್, ಮಾವಿನ ಹಣ್ಣು ಗೋಧಿಕಡ್ಡಿ ಎಣ್ಣೆ ಏಕದಳ ಮತ್ತು ದ್ವಿದಳ ದಾನ್ಯಗಳಲ್ಲಿ ಹೆಚ್ಚಾಗಿ ‘ಇ’ ವಿಟಾಮಿನ್ ಇದೆ.
ಕಬ್ಬಿಣಾಂಶವಿರುವ ಆಹಾರಗಳನ್ನು ಹೆಚ್ಚು ಸೇವಿಸಿ, ನಾವು ತೆಗೆದುಕೊಳ್ಳುವ ಉಸಿರಿನ ಆಮ್ಲಜನಕ ರಲ್ಲಿ ಶೇಕಡ 40ಭಾಗ ಆಮ್ಲಜನಕವು ಈ ಮಿದುಳೇ ಉಪಯೋಗಿಸುತ್ತದೆ. ಆದ್ದರಿಂದ ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನವಾಗಿ, ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗಿ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತದೆ. ಈ ಆಮ್ಲಜನಕವಿಲ್ಲದೆ ಮಿದುಳಿನಲ್ಲಿರುವ ಜೀವಕೋಶಗಳು ಶುದ್ಧವಾಗದೆ ಅಶುದ್ಧ ವಸ್ತು ಶೇಖರವಾಗಿ ಮಿದುಳಿಗೆ ಬಾಧೆಯಾಗಿ ಇತರ ವ್ಯಾಧಿಗಳು ಕಾಣಿಸಿ ಕೊಳ್ಳುವುದಲ್ಲದೆ, ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಇರುತ್ತದೆ.
ಮೆದುಳಿಗೆ ಸಹಾಯಕವಾಗುವ ಆಹಾರಗಳು
ನಿಮ್ಮ ಮೆದಳು ಚುರುಕಾಗಿ ಕಾರ್ಯ ನಿರ್ವಹಿಸಲು ನೀವು ಈ ಆಹಾರಗಳನ್ನು ಸೇವಿಸಬೇಕು.
ಮೀನುಗಳಲ್ಲಿ – ಹಣ್ಣು ಮೀನು/ ಹಣ್ಣು ಗಪ್ಪೆ ಪಂಜರ, ಮಾಕರೆಲ್- ಇವುಗಳಲ್ಲಿ ಒಮೆಗಾ-3ಪ್ಯಾಟಿ ಆ್ಯಸಿಡ್ ಹೆಚ್ಚು
ಎಣ್ಣೆಗಳಲ್ಲಿ – ಆಲಿವ್ ಆಯಿಲ್ ತುಂಬಾ ಒಳ್ಳೆಯದು. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಕೊಬ್ಬನ್ನು ದಮನ ಮಾಡುತ್ತದೆ. ಇದರಿಂದ ಮೆದುಳಿಗೆ ಬರುವ ಪಕ್ಷವಾತ ಅಲ್ಲೆಮರ್ಸ್ ವ್ಯಾಧಿಗಳು ನಿವಾರಣೆಯಾಗುತ್ತದೆ.
ನಟ್ಸ್ (ಬೀಜ)- ಆಕ್ರೋಟ್ (ವಾಲ್ ನಟ್) ಮೆದುಳಿಗೆ ಸಹಾಯಕಾರಿ.
ಹಣ್ಣುಗಳಲ್ಲಿ: ಚೆರ್ರಿ ಸ್ಟ್ರಾಬೆರಿ, ಬ್ಲೂಬೆರ್ರಿ ನೇರಳೆಯಂತವು ಮೆದುಳಿಗೆ ಉತ್ತಮ.
ಸೊಪ್ಪು ತರಕಾರಿಗಳು – ಪಾಲಕ್ ಸೊಪ್ಪು, ಮೆದುಳನ್ನು ಚುರುಕಾಗಿ ಬೆಳೆಸುತ್ತದೆ. ಬೀಟ್ ರೂಟ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮೆದುಳಿನ ಕಣಗಳನ್ನು (ಜೀವಕೋಶ) ದೀರ್ಘಕಾಲ ಆರೋಗ್ಯವಾಗಿರಿಸಲು, ಮತ್ತು ಅನೇಕ ವ್ಯಾಧಿಗಳಿಂದ ರಕ್ಷಣೆ ನೀಡುತ್ತದೆ.
ಗ್ರೀನ್ ಟೀ – ಮೆದುಳಿಗೆ ಸಹಕಾರಿ.
ಅಪಾಯಕಾರಿ ಆಹಾರ – ಪ್ರತಿದಿನ ಉಪ್ಪು 6 ಗ್ರಾಂಗಿಂತ ಹೆಚ್ಚಾದರೆ ದೇಹದ ಆರೋಗ್ಯ ಮತ್ತು ಮೆದುಳಿಗೆ ಹಾನಿಕರ, ಸಿಹಿಯಾದ ಕೂಲ್ ಡ್ರಿಂಕ್ಸ್ ತಂಪುಪಾನಿಯಗಳು, ಕೊಬ್ಬಿರುವ ಮಾಂಸಾಹಾರ, ಆಲೋಪಾಲ್ ಬಿಡಬೇಕು.
ಮುದ್ರೆ
ಬೆನ್ನು ಹುರಿ ತೊಂದರೆಗೆ – ವಾಯು ಮುದ್ರೆ, ಸಹಜ ಶಂಖ ಮುದ್ರೆ ಮತ್ತು ಪ್ರಾಣಮುದ್ರೆ ಮಾಡಿ.
ಪ್ರಾಣಾಯಾಮ
ಪ್ರತಿದಿನ 20 ನಿಮಿಷ ಮಾಡಿ ಕಪಾಲಿ ಭಾತಿ ಎರಡು ಮೂರು ನಿಮಿಷ ಅನುಲೋಮ ವಿಲೋಮ ಮೂರು 10 ನಿಮಿಷಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಮೆದುಳು ಕಾರಕ ಭಾವ – ಲಗ್ನ
ಮಿದುಳು ಕಾರಕ ರಾಶಿ – ಮೇಷ, ಅನಂತರ ಕುಂಭರಾಶಿ.
ಪೂರ್ಣ ಮಿದುಳುಕಾರಕ ಗ್ರಹ – ಗುರು (ಬಲಮಿದುಳು – ಬುಧ,
ಎಡಮಿದುಳು. ಕುಜಕಾರಕರು)
ಮಿದುಳಿನ ಜೀವಕೋಶ ಮತ್ತು ದೇಹದಲ್ಲಿ ರಕ್ತ ಚಲನೆಯರಾಶಿ – ಕುಂಭ.
ಕೊಲೆಸ್ಟ್ರಾಲ್ ಮತ್ತು ಕಬ್ಬಿಣಾಂಶಕಾರಕ ಗ್ರಹ – ಶನಿ.
ವಿಷಕ್ರಿಮಿ ಕಾರಕಗ್ರಹ – ರಾಹು.
ರಕ್ತಕಾರಕ ಗ್ರಹಗಳು – ಕುಜ ಅನಂತರ ಚಂದ್ರ.
ರಕ್ತಕಾರಕ ರಾಶಿ – ಸಿಂಹ.
ಕಬ್ಬಿಣಾಂಶ ಕಾರಕರಾಶಿ – ಮೀನ.
ರಕ್ತದಲ್ಲಿ ಚೆನ್ನಾಗಿ ಕಬ್ಬಿಣಾಂಶವಿದ್ದರೆ ಅವರ ರಕ್ತದಲ್ಲಿ ಆಮ್ಲಜನಕವೂ ಸಹ ಉತ್ತಮವಾಗಿದ್ದು ದೇಹದ ಅಂಗಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ಮಿದುಳಿಗೆ ಆಮ್ಲಜನಕವ ಅತ್ಯವಶ್ಯಕ. ಅಧಿಕೃತ ಪ್ರಮಾಣದಲ್ಲಿ ರಕ್ತದಲಿಲ್ಲದಿದ್ದರೆ ರಕ್ತವು
ಮಿದುಳಿನ ಕೋಶಗಳಿಗೆ ಆಮ್ಲಜನಕ ನೀಡಿ ಅದನ್ನು ಶುಷ್ಕಮಾಡಲಾಗದು. ಇದರಿಂದ ಮಿದುಳಿನಲ್ಲಿಯೇ ಕಲ್ಮಶ ಶೇಖರವಾಗಿ ಮಿದುಳಿನ ಕೋಶ ಗಳಿಗೆ ವೇಧನೆಯನ್ನು ನೀಡುತ್ತದೆ. ಇದರಿಂದ ತಲೆನೊವು
ಆರಂಭವಾಗಿ, ಮೆದುಳಿನಲ್ಲಿ ರಕ್ತ ಕಲ್ಮಶವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿದೆ. ಆದ್ದರಿಂದ ನಾವು ಮೀನರಾಶಿ ಮತ್ತು ಕುಂಭರಾಶಿಯನ್ನು ಪರಿಶೀಲಿಸ ಬೇಕು.
*ಕುಂಭರಾಶಿಯು ರಕ್ತಸಂಚಾರ ಮತ್ತು ಮಿದುಳಿನ ಜೀವಕೋಶ ರಾಶಿ.
ಇದು ಪೀಡಿತವಾದರೆ, ಅದರಲ್ಲೂ ಅಗ್ನಿತತ್ವ ಗ್ರಹಗಳಿಂದ ಪೀಡಿತವಾದರೆ ರಕ್ತ ಹೆಪ್ಪುಗಟ್ಟಿ ಅದರ ಸಂಚಾರಕ್ಕೆ ಅಡ್ಡಿಯಾಗಿ ಹೃದಯಾಘಾತ, ಮಿದುಳಿನ ಆಘಾತವಾಗುವ ಸಾಧ್ಯತೆ ಹೆಚ್ಚು ಆದ್ದರಿಂದ ಈ ರಾಶಿ ಕೆಟ್ಟಾಗ ಹೃದಯಾಘಾತ ಅಥವಾ ಮಿದುಳುಘಾತ ಆಗಿರುವವರು ಎಚ್ಚರಿಕೆ ವಹಿಸುವುದು ಅಗತ್ಯ.