ನಾಟಕೀಯತೆಗಾಗಿ ಬ್ಲಾಡ್ ಕ್ಯಾನ್ಸರ್ ರೋಗವನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳುವುದನ್ನು ನೋಡುತ್ತಲೇ ಇರುತ್ತೇವೆ ಬಿಳಿಯ ರಕ್ತಕಣಗಳನ್ನು ಉತ್ಪತ್ತಿ ಮಾಡುವ ಮೂಳೆ ಮಚ್ಚೆಯಲ್ಲಿ ಅಗತ್ಯಕ್ಕೆ ಮೀರಿ ವಿಪರೀತವಾಗಿ ಬಿಳಿಯ ಕಣಗಳು ಉತ್ಪತ್ತಿಯಾಗುವುದರಿಂದ ಬ್ಲಡ್ ಕ್ಯಾನ್ಸರ್ ಬರುತ್ತದೆ.
ಈ ವ್ಯಾದಿಯಿರುವವರಲ್ಲಿ ಪರಿ ಪಕ್ವವಾಗುವ ಸ್ಥಿತಿಯಲ್ಲಿರುವ ಬಿಳಿ ರಕ್ತಕಣಗಳು ಅಸಂಖ್ಯಾತವಾಗಿ ಉತ್ಪತ್ತಿಯಾಗಿ ಮಾಮೂಲು ಬಿಳಿ ರಕ್ತ ಕಣಗಳ ಉತ್ಪಾದನೆ ಕುಂಠಿತಗೊಳ್ಳುತ್ತದೆ.
ಅಸಂಖ್ಯಾತವಾಗಿ ಉತ್ಪತ್ತಿಯಾಗಿ ಈ ಪರಿಪಕ್ವ ಬಿಳಿ ರಕ್ತಕಣಗಳು, ಮೂಳೆಯ ಮಜ್ಜೆಯಿಂದ ರಕ್ತ ಪ್ರವಾಹಕ್ಕೆ ಪ್ರವೇಶಿಸಿ ಶರೀರದಲ್ಲೆಲ್ಲ ಹರಡುತ್ತವೆ.
ಮಾಮೂಲು ಪರಿಸ್ಥಿತಿಯಲ್ಲಿ ಮನುಷ್ಯನ ಶರೀರದಲ್ಲಿ 4000 ದಿಂದ 11000 ವರೆಗೆ ಇರುವ ಬಿಳಿ ರಕ್ತಕಣಗಳು ರಕ್ತದ ಕ್ಯಾನ್ಸರ್ ಇರುವ ವ್ಯಕ್ತಿಗಳಲ್ಲಿ ಲಕ್ಷಗಟ್ಟಲೆ ಇರುತ್ತವೆ.
ಎಲುವಿನ ಮಚ್ಚೆಯಲ್ಲಿ ತಯಾರಾಗುವ ಬಿಳಿರಕ್ತಕಲೆಗಳು ಅಂದರೆ ಲುಕೇಮಿಯಾ ಕಣಗಳು ಗುಲ್ಮಲಿಂಫ್ ಗ್ರಂಥಿಗಳು ವೃಷಣಗಳು ಮಿದುಳು ಮೊದಲಾದ ಮುಖ್ಯ ಆವಯವಗಳಿಗೆ ಪ್ರವೇಶಿಸಿ, ಆಯಾ ಅವಯವಗಳು ಯಾವಾಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಂತೆ ಮಾಡುತ್ತವೆ.
ಲುಕೇನಿಯಾವನ್ನು ಎರಡು ಬಗೆಯಾಗಿ ವಿಭಜಿಸಿದ್ದಾರೆ.
1.ಆಕ್ಯೂಟ್ ಲುಕೇಮಿಯಾ
2.ಕ್ರಾನಿಕ್ ಲುಕೇಮಿಯಾ
ಆಗಿಂದಾಗ ಹೊಸದಾಗಿ ಬರುವ ಅಕ್ಯೂಟ್ ಲುಕೇಮಿಯಾ ಹತಿ ಅಪಾಯಕಾರಿಯಾದದ್ದು ಇದು ಹೆಚ್ಚಾಗಿ ಮಕ್ಕಳಲ್ಲಿ ಬರುತ್ತದೆ.
ದೀರ್ಘ ಕಾಲದಿಂದ ಬೇರೂರಿದ ಕ್ರಾನಿಕ್ ಲುಕೇಮಿಯಾ ಎಂದು ಕರೆಯಲ್ಪಡುವ ರೋಗ ಹೆಚ್ಚಾಗಿ ದೊಡ್ಡವರಲ್ಲಿ ಬರುತ್ತದೆ. ನಿಧಾನವಾಗಿ ವೃದ್ಧಿಹೊಂದುದೆ ಕ್ರಾನಿಕ್ ಲುಕೇಮಿಯಾದಲ್ಲಿ ಗುಲ್ಮ, ಲಿವರ್,ಮೊದಲಾದ ಅವಯವಗಳ ಗಾತ್ರ ಹೆಚ್ಚುತ್ತದೆ.
ಕಾರಣಗಳು
ಲುಕೇಮಿಯಾಗೆ ಪ್ರತ್ಯೇಕ ಕಾರಣಗಳಂತೂ ಗೊತ್ತಿದ್ದರೂ ರೇಡಿಯೇಷನ್ನಿಂದಾಗಿ, ಕೆಲವು ಬಗೆಯ ರಾಸಾಯನಿಕಗಳ ಪ್ರಭಾವದಿಂದ ಒಂದು ಪ್ರತ್ಯೇಕ ವೈರಸ್ ನಿಂದಲೂ, ಕೆಲವು ಔಷಧಿಗಳ ಕಾರಣದಿಂದಲೂ ಅನುವಂಶಿಯವಾಗಿಯೂ ಬರಬಹುದು.
ಆಕ್ಯೂಟ್ ಲುಕೇತೆಮಿಯಾ ಲಕ್ಷಣಗಳು
ಆಕ್ಯೂಟ್ ಲುಕೇಮಿಯಾದ ಕೆಲವು ಲಕ್ಷಣಗಳು ಈ ಕೆಳಗಿನಂತಿರುತ್ತವೆ:
1.ಅಸಾಧಾರಣವಾದ ಆಯಾಸ
2.ಚಿಕ್ಕ ಚಿಕ್ಕ ಗಾಯಗಳಿಂದ ಹೆಚ್ಚು ರಕ್ತಸ್ರಾವ ವಾಗುವುದು
3.ಮತ್ತೆ ಸೋಂಕುಗಳಿಂದ ರೋಗಿಗೀಡಾಗುವುದು.
4.ಗುಲ್ಮಾ ಬೆಳೆಯುವುದರಿಂದ ಕಿಬ್ಬೊಟ್ಟೆಯ ಒಳಗೆ ಭಾರವಾಗಿರುವಂತೆ ಅನಿಸುವುದು
5. ಮೂಳೆಗಳಲ್ಲಿ ನೋವು.
6. ಹಸಿವು ನಶಿಸುವುದು ತೂಕ ಕಡಿಮೆಯಾಗುವುದು.
7. ಆಗಾಗ ಒಳಜ್ವರ ಬರುವುದು ಅನಂತರ ರಕ್ತಹೀನತೆ ಕಂಡುಬರುವುದು
8. ಮಲದ ರಕ್ತ ಬೀಳುವುದು
9. ಗಂಟಲು ನೋವು, ಬಾಯಿ, ಹೆಬ್ಬೆರಳಿನಲ್ಲಿ ಹುಣ್ಣುಗಳು,ಇತ್ಯಾದಿ