ನೊಣ ಕುಳಿತ ಆಹಾರ :
ನಾವು ತಿನ್ನು ಆಹಾರ ಪದಾರ್ಥಗಳಿಗೆ ನೊಣಗಳು ಮುತ್ತಿದಾಗ ಏನಾಗುವುದು ಗೊತ್ತೇ
★ ಆಹಾರ ಪದಾರ್ಥವನ್ನು ನೋಣ ಇದ್ದುದ್ದನ್ನು ಇದ್ದಂತೆಯೇ ತಿನ್ನಲಾರದು. ಅದಕ್ಕಾಗಿ ಮೊದಲು ಆ ಪದಾರ್ಥದ ಮೇಲೆ ಕಕ್ಕುತ್ತದೆ.ನಂತರ ಹಾಗೆ ಕಕ್ಕಿದ್ದನ್ನು ತನ್ನ ಕಾಲುಗಳಿಂದ ಆಹಾರ ಪದಾರ್ಥದೊಳಕ್ಕೆ ತುಳಿಯುತ್ತದೆ. ಇದರಿಂದ ವಾಂತಿಯೊಡನೆ ಕಲೆತ ಆಹಾರ ಪದಾರ್ಥ ದ್ರವ ರೂಪಕ್ಕೆ ಬರುತ್ತದೆ.ಹೀಗೆ ತುಳಿಯುವಾಗ ನಮಗೆ ಹಾನಿಮಾಡುವ ಸೂಪರ್ ಸೂಕ್ಷ್ಮ ಜೀವಿಗಳು ಕೂಡಾ ಆಹಾರ ಪದಾರ್ಥಕ್ಕೆ ಸೇರುತ್ತವೆ.
★ಮೃದುವಾಗಿ ದ್ರವ ಸ್ಥಿತಿಗೆ ಬಂದ ಆಹಾರವನ್ನು ವಾಂತಿಯೊಂದಿಗೆ ನೊಣ ಮತ್ತೆ ಒಳಕ್ಕೆ ಹೀರಿಕೊಳ್ಳುತ್ತದೆ. ಹಾಗೆ ಹೀರಿಕೊಳ್ಳುವ ಸಮಯದಲ್ಲೇ ಸ್ವಲ್ಪ ಮಲವನ್ನೂ ವಿಸರ್ಜಿಸುತ್ತದೆ.ವಿಸರ್ಜಿಸಲ್ಪಟ್ಟ ಮಲ ಆಹಾರ ಪದಾರ್ಥದ ಮೇಲೆ ಉಳಿಯುತ್ತದೆ. ಆಹಾರವನ್ನು ನಾವು ತಿನ್ನುತ್ತೇವೆ
★ಈಗ ನಾವು ಏನೆನ್ನು ತಿಂದಂತಾಯಿತು. ಆಹಾರವನ್ನು ಅದರೊಡನೆ
★ನೊಣದ ವಾಂತಿಯನ್ನು
★ನೊಣದ ಮಲವನ್ನು
★ ಸೂಕ್ಷ್ಮ ಕ್ರಿಮಿಗಳನ್ನು.
ಆದ್ದರಿಂದ ಆಹಾರ ಪದಾರ್ಥಗಳ ವಿಷಯದಲ್ಲಿ ನಾವು ತೆಗೆದುಕೊಳ್ಳಬೇಕಾದ ಜಾಗರೂಕತೆಗಳು ಕೆಲವಿದೆ.ಅವುಗಳೆಂದರೆ
★ಆಹಾರ ಪದಾರ್ಥಗಳ ಮೇಲೆ ಮುಚ್ಚಳ ಮುಚ್ಚಬೇಕು.
★ಕುಡಿಯುವ ನೀರಿನ ಪಾತ್ರೆಗಳ ಮೇಲೂ ಮುಚ್ಚಳ ಹಾಕಿ ಮುಚ್ಚಬೇಕು.
★ ಡಸ್ಟ್ ಬಿನ್ ಗಳನ್ನು ತೆರೆದಿಡಬಾರದು.
★ಒಟ್ಟಿನಲ್ಲಿ ಮನೆಯ ಪರಿಸರದಲ್ಲಿ ನೊಣಗಳಿರದಂತೆ ನೋಡಿಕೊಳ್ಳಬೇಕು.