ಮನೆ ರಾಜ್ಯ ಇಂದು ರಕ್ತ ಚಂದ್ರಗ್ರಹಣ – ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ..!

ಇಂದು ರಕ್ತ ಚಂದ್ರಗ್ರಹಣ – ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ..!

0

ಇಂದು ನಭೋ ಮಂಡಲ ಚಂದ್ರಗ್ರಹಣದ ಕೌತಕಕ್ಕೆ ಸಾಕ್ಷ್ಯಿಯಾಗಲಿದೆ. ಈ ರಕ್ತ ಚಂದ್ರಗ್ರಹಣ ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ ಅಂತ್ಯವಾಗಲಿದೆ. ನಮ್ಮ ರಾಜ್ಯದಲ್ಲಿ ಚಂದ್ರಗ್ರಹಣದ ಗೋಚರವಾಗದೇ ಇದ್ದರೂ ಗ್ರಹಣದ ಪ್ರಭಾವ ಇರಲಿದೆ. ಹಾಗಾಗಿ ಇಂದು ಬೆಂಗಳೂರಿನ ಪ್ರಮುಖ ದೇವಾಲಯದಲ್ಲಿ ಗ್ರಹಣದ ಪ್ರಯುಕ್ತ ವಿಶೇಷ ಪೂಜೆಗಳು ನಡೆಲಿದೆ.

ಇಂದು ಮಧ್ಯಾಹ್ನ 3:27ಕ್ಕೆ ರಕ್ತಚಂದ್ರಗ್ರಹಣ ಆರಂಭವಾಗಿ ಸಂಜೆ 6:46ಕ್ಕೆ ಮೋಕ್ಷಗೊಳ್ಳಲಿದೆ. ಈ ಸಮಯದಲ್ಲಿ ಬೆಂಗಳೂರಿನ ಎಲ್ಲಾ ದೇವಾಲಯ ಬಂದ್ ಆಗಲಿದೆ. ಗ್ರಹಣದ ಕಾರಣದಿಂದ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕಾಡು ಮಲ್ಲೇಶ್ವರ ದೇವಾಲಯ: ಇಂದು ಬೆಳಗ್ಗೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಶಿವನಿಗೆ ಬೆಳಗ್ಗೆಯೇ ವಿಶೇಷ ಪೂಜೆ ಮಾಡಿ, ಬಳಿಕ ಭಕ್ತರಿಗೆ ಮಧ್ಯಾಹ್ನ 12ರವರಗೆ ದರ್ಶನದ ವ್ಯವಸ್ಥೆ ಇರಲಿದೆ. ಬಳಿಕ ಸಂಜೆ ಗ್ರಹಣ ಶುದ್ಧಿ ಮಾಡಿ, ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ನೀಡಲಿದ್ದಾರೆ.

ಅಣ್ಣಮ್ಮ ದೇವಾಲಯ : ಮಂಗಳವಾರವಾಗಿರುವುದರಿಂದ ಬೆಳಗ್ಗೆ 6 ಗಂಟೆಗೆ ತಾಯಿ ಅಣ್ಣಮ್ಮನಿಗೆ ವಿಶೇಷ ಹಾಲಿನ ಅಭಿಷೇಕ ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಬಳಿಕ ಗ್ರಹಣದ ಮೋಕ್ಷದ ಬಳಿಕ ತಾಯಿಗೆ ಗಂಗೆಯ ಅಭಿಷೇಕ ಮಾಡಿ ಶುಚಿ ಮಾಡಿ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಜೊತೆಗೆ ನಾಳೆ ಬೆಳಗ್ಗೆ ಗ್ರಹಣ ಶಾಂತಿ ಹೋಮ ಕೂಡ ಮಾಡಲಿದ್ದಾರೆ.

ಗವಿಗಂಗಾಧರೇಶ್ವರ ದೇವಾಲಯ : ಇಂದು ಎಂದಿನಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ. 9 ಗಂಟೆವರೆಗೆ ಗಂಗಾಧರನಿಗೆ ವಿಶೇಷ ಪೂಜೆ ಮಾಡಲಿದ್ದಾರೆ. ಸಂಜೆ ಮತ್ತೆ ಗಂಗಾಧರೇಶ್ವರನಿಗೆ ಜಲಾಭಿಷೇಕ ಮಾಡಿ, ನಾಳೆ ಮಹಾಭಿಷೇಕ ಮಾಡಿ ಗ್ರಹಣ ಶಾಂತಿ ಮಾಡಲಾಗುತ್ತದೆ.

ಬನಶಂಕರಿ ದೇವಾಲಯ : ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದಲೇ ವಿಶೇಷ ಹುಣ್ಣಿಮೆ ಅಭಿಷೇಕ ಮತ್ತು ಪೂಜೆ ನಡೆಯಲಿದೆ. 8:30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಗ್ರಹಣದ ಬಳಿಕ ತಾಯಿ ಬನಶಂಕರಿಗೆ ವಿಶೇಷ ಅಭಿಷೇಕ ಮಾಡಿ ವಿಶೇಷ ಅಲಂಕಾರದಿಂದ ಭಕ್ತರ ದರ್ಶನ ನೀಡಲಿದ್ದಾಳೆ.

ಶನಿ ದೇವಾಲಯ : ಬೆಳಗ್ಗೆ 5ರಿಂದಲೇ ಶನಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಬಳಿಕ ಅಭಿಷೇಕ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ. ಸಂಜೆ ಗ್ರಹಣ ಶಾಂತಿ ಮಾಡಿ ನಾಳೆ ಬೆಳಗ್ಗೆ ಸತ್ಯನಾರಾಯಣ ಪೂಜೆ ಕೂಡ ಮಾಡಲಿದ್ದಾರೆ.

ಶ್ರೀ ಕೃಷ್ಣಮಠ : ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಕಾಲದಲ್ಲೂ ಮಠ ತೆರೆದಿರುತ್ತೆ.. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಂದ್ ಮಾಡಲಾಗುತ್ತೆ.. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣ ವೇಳೆಯಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಚಾಮುಂಡೇಶ್ವರಿ ದೇವಾಲಯ : ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಚಂದ್ರಗ್ರಹಣ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ದೇವಾಲಯ ಬಂದ್ ಮಾಡಲಾಗುತ್ತದೆ. ಕೊಲ್ಲೋರು ಶ್ರೀ ಮೂಕಾಂಬಿಕಾ ದೇವಿಗೆ ಗ್ರಹಣ ಕಾಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.