ಈ ರಕ್ತದ ತಟ್ಟೆಗಳು ಬಹಳ ಸೂಕ್ಷ್ಮವಾದ ಓವಲ್ ಅಥವಾ ವೃತ್ತಕಾರಿಯಾಗಿ ಉತ್ಪಾದನೆ ಆಗುತ್ತದೆ. ಜೀವಕಣಗಳಾಗದೆ ರಕ್ತದಲ್ಲಿ ತೇಲುತ್ತಿರುತ್ತದೆ. ಪ್ರೌಢಾವಸ್ಥೆಯಲ್ಲಿರುವ ಮನುಷ್ಯನಲ್ಲಿ ಇದು ಸಾಮಾನ್ಯವಾಗಿ ಒಂದು ಘನ ಮಿಲಿ ಮೀಟರ್ನಲ್ಲಿ ಎರಡರಿಂದ ನಾಲ್ಕು ಲಕ್ಷವಿರುತ್ತದೆ.ಈ ತಟ್ಟೆಗಳು ಕೆಂಪು ಮೂಳೆಯ ಮಜ್ಜೆಯಲ್ಲಿರುವ ಒಂದು ದೈತ್ಯ ಕೋಶದಕಣಗಳಿಂದ ಬೇರ್ಪಡುತ್ತದೆ. ಪ್ರತಿ ಒಂದು ತಟ್ಟೆಯ ಸೂಕ್ಷ್ಮಪೂರೆ ಪೊರೆಯಿಂದ ಆವೃತವಾಗಿದೆ.ರಕ್ತದಲ್ಲಿ ಇದು ಕೆಲಸ ರಕ್ತನಾಳ ಹರಿದು ಗಾಯವಾದಾಗ ರಕ್ತವು ನಾಳಗಳಿಂದ ಹರಿದು ಹೊರಗೆ ಹೋಗುತ್ತದೆ ಹೊಡೆದ ನಾಳಗಳ ಸ್ಥಳಗಳಲ್ಲಿ ತನ್ನ ತಟ್ಟೆಗಳನ್ನು ಅಡ್ಡವಾಗಿ ಇಟ್ಟು ರಕ್ತವನ್ನು ಹೊರ ಹೋಗದಂತೆ ಒಂದು ರಾಸಾಯನಿಕ ದ್ರವ್ಯವನ್ನು ಉತ್ಪತ್ತಿ ಮಾಡಿ ತಡೆಯುವ ಕೆಲಸವಾಗಿರುತ್ತದೆ. ಇದನ್ನು ಹೆಪ್ಪುಗಟ್ಟುವಿಕೆ ಎನ್ನುತ್ತೆವೆ ಇದರ ಆಯುಷ್ಯ ಕೇವಲ ಮೂರರಿಂದ ಐದು ದಿನಗಳು ಇದು ಗ್ರಂಥಿಯಲ್ಲಿ ನಾಶವಾಗುತ್ತದೆ ಮತ್ತೆ ಕೆಂಪು ಮೂಳೆಯ ಮಜ್ಜೆಯಿಂದ ಉತ್ಪತ್ತಿಯಾಗುತ್ತಾ ರಕ್ತ ಸೇರಿರುತ್ತದೆ.
ರಕ್ತದಾನ ಮತ್ತು ರಕ್ತದ ಗುಂಪು
ಕೆಲವು ಸಲ ಶಸ್ತ್ರಚಿಕಿತ್ಸಾ ಕಾಲದಲ್ಲಿ ರಕ್ತವು ದೇಹದಿಂದ ಸೋರಿಹೋಗುವ ಕಾರಣ ರೋಗಿಯ ದೇಹದಲ್ಲಿ ರಕ್ತ ಪ್ರಮಾಣ ಕಡಿಮೆಯಾಗಿ ಅವನಿಗೆ ತೊಂದರೆ ಬರಬಹುದು. ಆಗ ವೈದ್ಯರು ಸಕಾಲದಲ್ಲಿ ಇತರರ ರಕ್ತವನ್ನು ಸಂಗ್ರಹಿಸಿ, ಈ ರೋಗಿಗೆ ನೀಡಬೇಕಾಗಬಹುದು. ಅದರೆ ರೋಗಿಗೆ ಎಲ್ಲರ ರಕ್ತ ಹೊಂದಾಣಿಕೆ ಯಾಗದೆ, ತೊಂದರೆ ಪಡಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ಶಾಸ್ತ್ರವು ಈ ರಕ್ತವನ್ನು ಅನೇಕ ವಿಧದಲ್ಲಿ ವಿಂಗಡಿಸಿದ್ದಾರೆ ಮತ್ತು ಯಾರಿಗೆ ಯಾವ ವಿಧದ ರಕ್ತ ಸರಿಯಾಗುತ್ತದೆಂದು ಸಂಶೋಧನೆ ಮಾಡಿ ತಿಳಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಮೂರು ಗುಂಪಾಗಳಾಗಿ ಮಾಡಿದ್ದಾರೆ.
ಅವು ಎ, ಬಿ,ಓ,ಮತ್ತು ಆರ್. ಎಚ್. (Rh)
ಎ, ಬಿ,ಓ (System) ವಿಧಾನ
ಮಾನವ ರಕ್ತವನ್ನು ನಾಲ್ಕು ವಿಧದಲ್ಲಿ ವಿಂಗಡಿಸಿದ್ದಾರೆ ಎ, ಬಿ, ಓ ಮತ್ತು ಎಬಿ (A, B, O, AB,)ಇದನ್ನು ಯಾರಿಗೆ ಯಾವ ರಕ್ತದ ಗುಂಪು ಹೊಂದಾಣಿಕೆಯಾಗುತ್ತದೆಂದು ಪರಿಶೀಲಿಸಬೇಕು.
ಇದರ ಪ್ರಕಾರ ‘ಓ’ ಗುಂಪು ರಕ್ತವನ್ನು ಉಳಿದ ಎಲ್ಲಾ ರೀತಿಯ ರಕ್ತದ ಗುಂಪಿನವರಿಗೂ ನೀಡಬಹುದು. ಆದರೆ ಇದರ ಗುಂಪಿನವರಿಂದ ಇವರು ಪಡೆಯುವ ಹಾಗಿಲ್ಲ!
(ಅಂದರೆ ಎ, ಬಿ, ಎಬಿ ಗುಂಪು) ಅದಕ್ಕೆ ಇದನ್ನು ‘ಸಾರ್ವತ್ರಿಕ ದಾನಿ’ (Universal donor) ಎಂದು ಕರೆಯುತ್ತಾರೆ. ಅದೇ ರೀತಿ ಎಬಿ ಗುಂಪಿನವರು ಉಳಿದ ಇತರ ಗುಂಪಿನವರಿನಿಂದ ಪಡೆಯಬಹುದು. ಆದರೆ ಇತರರಿಗೆ ನೀಡುವ ಆಗಿಲ್ಲ!
ಎ ಗುಂಪಿನವರು ಎ ಯವರಿಗೆ, ಬಿ ಗುಂಪಿನವರು ಬಿ ಯವರಿಗೆ ಎ ಬಿ ಗುಂಪಿನವರು ಎಬಿ ಯವರಿಗೆ ಮಾತ್ರ ನೀಡಬಹುದು.
ಆರ್. ಎಚ್.ಪ್ರವರ್ತಕ
ರಕ್ತದ ಗುಂಪಿನ ಗುಣವನ್ನು ತಿಳಿಯಲು ನಾವು ಆರ್, ಎಚ್. ಉಪಯೋಗಸುತ್ತೇವೆ. ಈ ನಾಲ್ಕು ಗುಂಪಿನಲ್ಲಿ ಆರ್. ಎಚ್. + ಪಾಸಿಟಿವ್ ಮತ್ತು ಆರ್.ಎಚ್. —ನೆಗೆಟಿವ್ ಎಂಬ ಎರಡು ವಿಧವಿದೆ.
ಆರ್.ಎಚ್ + ಪಾಸಿಟಿವ್ ಗುಂಪಿನ ರಕ್ತವನ್ನು ಆರ್. ಎಚ್ —ನೆಗೆಟಿವ್ ಗುಂಪಿನವರಿಗೆ ನೀಡಿದರೆ, ಎರಡು ವಾರದೊಳಗೆ ರಕ್ತ ಸ್ವೀಕರಿಸಿ ದವನಲ್ಲಿ ರಕ್ತದಲ್ಲಿ ಪ್ರತಿರೋಧ ಉಂಟಾಗುತ್ತದೆ.
ಆದರೆ ಮತ್ತೆ ಎರಡನೇ ಸಲ ಅದೇ ದಾನಿಗೆ ಈ ರಕ್ತ ನೀಡಿದರೆ ಮೊದಲು ನೀಡಿದ ರಕ್ತದ ಜೊತೆಗೆ ಪರಸ್ಪರ ಕ್ರಿಯೆ ಪರಿಣಾಮವಾಗಿ ದಾನ ಪಡೆದವರಿಗೆ ಅಲರ್ಜಿಯಾಗಿ, ಪ್ರಾಣಾಪಾಯ ಉಂಟಾಗುವ ಸಂಭವವಿದೆ.
ಆರ್ ಎಚ್ ಗುಂಪಿನಿಂದ ಗರ್ಭಿಣಿಯರಿಗೆ ಅಪಾಯ
ಆರ್. ಎಚ್ —ನೆಗೆಟಿವ್ ರಕ್ತಗುಂಪಿನ ಸ್ತ್ರೀಯ ಗರ್ಭದಲ್ಲಿ ಆರ್.ಎಚ್.+ಪಾಸಿಟಿವ್ ರಕ್ತ ಗುಂಪಿನ ಮಗು ಬೆಳೆಯುತ್ತಿದ್ದರೆ,(ಪತಿಯ ರಕ್ತದ ಗುಂಪಿನ ಆರ್. ಎಚ್. ಪಾಸಿಟಿವ್ ಆಗಿದ್ದಾಗ )ಮೊದಲ ಮಗು ಸಾಮಾನ್ಯ ಹೆರಿಗೆಯಾಗುತ್ತದೆ. ಆದರೆ ಮತ್ತೆ ಶೀಘ್ರದಲ್ಲಿ 2ನೇ ಹೆರಿಗೆಯಲ್ಲಿ ಮತ್ತೆ ಆರ್. ಎಚ್ + ಪಾಸಿಟಿವ್ ಶಿಶು ಗರ್ಭದಲ್ಲಿದ್ದರೆ, ಆ ಶಿಶುವಿನ ಪಿಂಡ ಮರಣ ಅಥವಾ ಗರ್ಭಪಾತ ಸಂಭವಿರುತ್ತದೆ.