ಮನೆ ಆರೋಗ್ಯ ರಕ್ತದ ಕಾರ್ಯ

ರಕ್ತದ ಕಾರ್ಯ

0

 ಒಯ್ಯುವುದು

 ಆಹಾರ ಸಾಗಿಸುವುದು— ರಕ್ತವು ನಾವು ತಿಂದ ಆಹಾರವನ್ನು ಜೀರ್ಣವಾಗಿ ಜಠರದಿಂದ ಸಣ್ಣ ಕರುಳು ಸೇರುತ್ತದೆ ಸಣ್ಕಕರುಳಿನಲ್ಲಿ ಆಹಾರದಲ್ಲಿರುವ ವಿಟಮಿನ್ಸ್, ಸಕ್ಕರೆ,ಖನಿಜ, ಲವಣಗಳು,ಅಮೋನಿಯಂ ಆಮ್ಲ ಇತರ  ಪದಾರ್ಥಗಳ  ಕಣಗಳನ್ನು ಅಲ್ಲಿಯ ಸೂಕ್ಷ್ಮ ಗ್ರಂಥಿಗಳು ಸೆಳೆದು, ರಕ್ತಕ್ಕೆ ನೀಡುತ್ತದೆ ಆ ರಕ್ತ ಈ ಆಹಾರವನ್ನು ರಕ್ತನಾಳಗಳ ಮುಖಾಂತರ ಹೃದಯಕ್ಕೆ ಸಾಗಿಸುತ್ತದೆ.

Join Our Whatsapp Group

     ಆಮ್ಲಜನಕ ಸಾಗಿಸುವುದು— ಇದೇ ರಕ್ತವು ಶ್ವಾಸಕೋಶದಿಂದ ಆಮ್ಲಜನಕವನ್ನು ಎಲ್ಲಾ ಸ್ನಾಯುಗಳಿಗೆ ಸಾಗಿಸುತ್ತದೆ. ಆಮ್ಲಜನಕವು ಇದರಲ್ಲಿರುವ ಕೆಂಪು ರಕ್ತಕಣಗಳ ಹಿಮೋಗ್ಲೋಬಿನ್ ನಲ್ಲಿ ಸೇರಿ, ಆಕ್ಸಿಯುಮೋ ಗ್ಲೋಬಿನ್ ರೂಪದಲ್ಲಿ ದೇಹದ ಸ್ನಾಯುಗಳಿಗೆ ಒಯ್ಯುತ್ತದೆ.

 ಇಂಗಾಲದ ಡೈ ಆಕ್ಸೈಡ್ —ಒಯ್ಯುವುದು ಸ್ನಾಯು ಜೀವಕೋಶಗಳು ವಿಸರ್ಜಿಸುವ ಇಂಗಾಲದ ಡೈಯಾಕ್ಸೈಡ್ ಅನ್ನು ಸ್ವಲ್ಪ ಭಾಗ ಅಶುದ್ಧ ರಕ್ತವಾಹಿನಿಯಲ್ಲಿ ಸಾಗಿಸಿ ಶ್ವಾಸಕೋಶಗಳಿಗೆ ಒಯ್ಯುತ್ತದೆ.

     ಅಶುದ್ಧ ವಸ್ತುಗಳನ್ನು ಸಾಗಿಸುವುದು— ಸ್ನಾಯುವಿನಿಂದ ಲಿವರ್,ಮೂತ್ರಪಿಂಡ ಅಥವಾ ಚರ್ಮದ ಮುಖಾಂತರ ಹೊರ ಹಾಕಲು ತೊಂದರೆಯಿಲ್ಲದಂತೆ ರಕ್ತದಲ್ಲಿ ಒಯ್ಯುತ್ತದೆ.

       ಹಾರ್ಮೋನ್ಸ್ ವಿತರಣೆ ಮಾಡುವುದು— ವಿಶೇಷ ಗ್ರಂಥಿಗಳಿಂದ ಸ್ರವಿಸುವ ರಸಗಳನ್ನು ರಕ್ತದಲ್ಲಿ ಸೇರಿಸಿಕೊಳ್ಳುತ್ತದೆ.

     ದೇಹದ ಉಷ್ಣಾಂಶವನ್ನು ಕಾಯುತ್ತದೆ— ರಕ್ತವು ದೇಹದ ಉಷ್ಣಾಂಶವನ್ನು ಸಮಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.   

ರಕ್ತದಿಂದ ರಕ್ಷಣೆ

ರಕ್ತಹೆಪ್ಪುಗಟ್ಟುವುದು, ರಕ್ತದ ನಾಳವು ಅನಿವಾರ್ಯವಾಗಿ ಕತ್ತರಿಸಲ್ಪಟ್ಟಗ ಅದರಿಂದ ರಕ್ತವು ಹೊರಕ್ಕೆ ಬರಿದು ಹೋಗುತ್ತದೆ.ಇದರಿಂದ ರಕ್ತವು ದೇಹದಲ್ಲಿ ಇಳಿಮುಖವಾಗುತ್ತದೆ.ಇದನ್ನು ತಡೆಯಲು ರಕ್ತವು ಹೊರಗಿನ ವಾತಾವರಣಕ್ಕೆ ಹೆಪ್ಪುಗಟ್ಟುವ ಗುಣ  ಬೆಳೆಸಿಕೊಂಡಿದೆ. ಇದರಿಂದ ರಕ್ತ ನಷ್ಟವಾಗುವುದಿಲ್ಲ ಮತ್ತು ರಕ್ತಕ್ಕೆ ಹೊರಗಿನಿಂದ ಕಲ್ಮಶ ವಿಷಕ್ರಿಮಿಗಳು ಬಂದು ಸೇರುವ ಅವಕಾಶ ಇರುವುದಿಲ್ಲ.

ರಕ್ತದಲ್ಲಿರುವ ವಸ್ತುಗಳು

1.ದ್ರವ್ಯ ಭಾಗ ಅಥವಾ ಪ್ಲಾಸ್ಮಾ

 2.ಕೋಶಗಳ ಭಾಗ (ಕೆಂಪು, ಬಿಳಿರಕ್ತ ಕಣಗಳು,ರಕ್ತದ ಚೂರುಗಳು) ರಕ್ತದಲ್ಲಿ ಅನೇಕ ಸಣ್ಣ ಸಣ್ಣ ವಸ್ತುಗಳು ಶೇಕಡ 40 – 50 ಭಾಗ ಪ್ಲಾಸ್ಮಾ- ಶೇಕಡ  55 – 60 ಭಾಗವಿರುತ್ತದೆ.

 1.ಪ್ಲಾಸ್ಮ – ರಕ್ತದಲ್ಲಿ ದ್ರವ್ಯ ರೂಪದಲ್ಲಿರುತ್ತದೆ.ಇದು ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ.ಕ್ಷಾರ ದವ್ಯ, ಇದರಲ್ಲಿ ನೀರು – ಶೇಕಡ 90 – 92 ಭಾಗ,ಪ್ರೋಟೀನ್ಸ್ ಶೇಕಡಾ 7-8 ಭಾಗ, ಇತರ ವಸ್ತುಗಳು ಶೇಕಡ  1 ಭಾಗವಿರುತ್ತದೆ.ಅಂಗಾಂಗಗಳ ಲವಣಗಳು, ಅದರಲ್ಲಿ ಮುಖ್ಯವಾಗಿ ಸೋಡಿಯಂ ಕ್ಲೋರೈಡ್ ಮತ್ತು ಸೋಡಿಯಂ ಬೈಕಾರ್ಬೋನೇಟ್.ಅದರ ಜೊತೆಯಲ್ಲಿ ಇತರ ವಸ್ತುಗಳು ಗ್ಲುಕೋಸ್, ಅಮೋನಿಯ ಆಮ್ಲ,ಫೈಬರ್ಜನ್,ಯುರಿಯಾ,  ಹಾರ್ಮೋನ್ ಇತರ…..

    ಈ ಪ್ಲಾಸ್ಮಾದಲ್ಲಿ ಪ್ರೋಟೀನ್ ಫೈಬರ್ ತೆಗೆದು ಹಾಕಿದರೆ ಅದನ್ನು ರಕ್ತರಸವಾಗಿ ಉಳಿಯುತ್ತದೆ.

2.   ಕೋಶದ ಕಣ ಭಾಗ

     ಈ ರಕ್ತದಲ್ಲಿರುವ ಕಣಗಳು ಪ್ರಬಲ ಸೂಕ್ಷ್ಮದರ್ಶಕ ಯಂತ್ರದಿಂದ ಪರಿಶೀಲಿಸಿದಾಗ,ನಾವು ಕಣಗಳ ಗಾತ್ರ,ಕಾಣುವ ನೋಟ, ಲಕ್ಷಣಗಳನ್ನು ತಿಳಿಯಬಹುದು.

1. ಕೆಂಪು ರಕ್ತಕಣಗಳು (Erythrocytes)

   2.ಬಿಳಿ ರಕ್ತಕಣಗಳು (Ieukocytes)

   3.ರಕ್ತದ ಚೂರು( ಪ್ಲೇಟ್ ) (Thrombocytes)