ಮನೆ ರಾಜ್ಯ ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್

0

ಬೆಂಗಳೂರು : ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ನಾಳೆಯಿಂದ (ನ.1) 5ನೇ ಸೆಟ್ ರೈಲು ಟ್ರ್ಯಾಕಿಗಿಳಿಯಲಿದೆ. ಈ ಮೂಲಕ ಯೆಲ್ಲೋ ಮಾರ್ಗದಲ್ಲಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.

ಶನಿವಾರ (ನ.1) ನಮ್ಮ ಮೆಟ್ರೋದ ಯೆಲ್ಲೋ ಲೈನ್‌ಗೆ 5ನೇ ರೈಲು ಸೇರ್ಪಡೆಯಾಗಲಿದ್ದು, ಹೊಸ ರೈಲು ಸಂಚಾರದಿಂದ ಪ್ರಯಾಣಿಕರ ಕಾಯುವಿಕೆ 20 ನಿಮಿಷದಿಂದ 15 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಮೂಲಕ ಪೀಕ್ ಅವರ್‌ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಈಗಾಗಲೇ 5ನೇ ರೈಲಿನ ಪರೀಕ್ಷೆ ಮುಗಿದಿದ್ದು, ಕೊನೆಯ ಹಂತದ ತಾಂತ್ರಿಕ ಪರೀಕ್ಷೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಮೂಲಕ ಐದನೇ ರೈಲು ನಾಳೆಯಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.