ಬೆಂಗಳೂರು(Bengaluru): ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಮನಹಳ್ಳಿ ಡಿಪೋ ಬಳಿ ನಿನ್ನೆ ರಾತ್ರಿ ನಡೆದಿದೆ.
ಸುಮನಹಳ್ಳಿಯಿಂದ ಲಗ್ಗೆರೆ ರಸ್ತೆ ಮಾರ್ಗವಾಗಿ ಬೈಕ್ ಸವಾರ ಪ್ರಮೋದ್ (24) ಆಗಮಿಸುತ್ತಿದ್ದಾಗ ಹಂಪ್ ಇದ್ದ ಕಾರಣ ನಿಧಾನವಾಗಿ ಸಾಗಿದ್ದಾರೆ.
ಈ ವೇಳೆ ಹಿಂಬದಿಯಿಂದ ಬಂದ ಬಸ್, ಬೈಕ್ಗೆ ಗುದ್ದಿ ಸವಾರನ ಮೇಲೆ ಸಂಚರಿಸಿದೆ.
ಯಶವಂತಪುರದಿಂದ ಬನಶಂಕರಿಗೆ ಸಂಚರಿಸುವ ಬಿಎಂಟಿಸಿ ಬಸ್ ಇದಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ಬಸ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಕಾಮಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಚಾಲಕನನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.















