ಮೇಲುಕೋಟೆ: ಕಳೆದ ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಭ್ರೂಣಹತ್ಯೆಯ ದೊಡ್ಡ ಜಾಲ ಪತ್ತೆಯಾದ ಬೆನ್ನಲ್ಲೇ ಇದೀಗ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ದಳವಾಯಿ ಕೆರೆಯ ಸಮೀಪದಲ್ಲಿ ಮಂಗಳವಾರ ನವಜಾತ ಹೆಣ್ಣು ಶಿಶುವಿನ ಶವ ದೊರೆತಿದೆ.
ಮಗು ಎರಡು ದಿನದ ಹಿಂದಷ್ಟೇ ಜನಿಸಿದ್ದು, ಹೊಕ್ಕಳ ಬಳ್ಳಿಯನ್ನೂ ಕತ್ತರಿಸಿಲ್ಲ.ಶವವನ್ನು ಕವರ್ ನಲ್ಲಿ ಸುತ್ತಿ ಕೆರೆಯ ಸಮೀಪದ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ.
ಹೆಣ್ಣೆಂಬ ಕಾರಣಕ್ಕೆ ಎಸೆದಿದ್ದಾರೋ ಇಲ್ಲವೇ ಸತ್ತ ಮಗುವನ್ನು ಅಂತ್ಯಸಂಸ್ಕಾರ ನಡೆಸದೇ ಹಾಗೆಯೇ ಎಸೆದು ಹೋಗಿದ್ದಾರೆಯೋ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಮಗುವಿನ ದೇಹವನ್ನು ಶವ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಯಲ್ಲಿನ ಶವಾಗಾರಕ್ಕೆ ರವಾನಿಸಲಾಗಿದೆ.