ಶಿವಮೊಗ್ಗ: ಭದ್ರಾವತಿಯ ಗಣೇಶ ರೈಸ್ ಮಿಲ್ ನಲ್ಲಿ ಗುರುವಾರ ಸಂಭವಿಸಿದ ಬಾಯ್ಲರ್ ಸ್ಫೋಟಗೊಂಡು ನಾಪತ್ತೆಯಾಗಿದ್ದ ಓರವನ ಶವ ಶುಕ್ರವಾರ(ಡಿ.20) ಬೆಳಿಗ್ಗೆ ಪತ್ತೆಯಾಗಿದೆ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ರಘು ಎನ್ನಲಾಗಿದೆ.
ಭದ್ರಾವತಿ ಚನ್ನಗಿರಿ ರಸ್ತೆಯಲ್ಲಿ ಆರ್‌ಎಂಸಿ ಮುಂಭಾಗದಲ್ಲಿರುವ ಗಣೇಶ್ ರೈಸ್ ಮಿಲ್ ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಫೋಟಗೊಂಡಿತ್ತು ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ರಘು ಕಣ್ಮರೆಯಾಗಿದ್ದ ಎನ್ನಲಾಗಿದೆ ಈ ವೇಳೆ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡ ಶುಕ್ರವಾರ ಬೆಳಿಗ್ಗೆ ರಘು ಅವರ ಶವವನ್ನು ಪತ್ತೆಹಚ್ಚಿದೆ.
ಬಾಯ್ಲರ್ ಸ್ಫೋಟದಿಂದ ರೈಸ್ ಮಿಲ್ ಹಾನಿಗೀಡಾಗಿದ್ದು ಜೊತೆಗೆ ಪಕ್ಕದಲ್ಲಿದ್ದ ಎರಡು ಮನೆಗಳಿಗೂ ಹಾನಿಯಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿ ಪೊಲೀಸರಿಂದ ಕಾರ್ಯಚರಣೆ ನಡೆಸುತ್ತಿದ್ದಾರೆ.