ಮನೆ ರಾಜ್ಯ ಮತ್ತೆ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ – ಮೃತರ ಸಂಖ್ಯೆ 7ಕ್ಕೆ ಏರಿಕೆ..!

ಮತ್ತೆ ಫ್ಯಾಕ್ಟರಿಯಲ್ಲಿ ಬಾಯ್ಲರ್‌ ಸ್ಫೋಟ – ಮೃತರ ಸಂಖ್ಯೆ 7ಕ್ಕೆ ಏರಿಕೆ..!

0

ಬೆಳಗಾವಿ : ಬಾಯ್ಲರ್ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಕಾರ್ಮಿಕರ ಪೈಕಿ ಮತ್ತೆ ಮೂವರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡಿತ್ತು. ಕಾರ್ಖಾನೆ ವಾಲ್ ದುರಸ್ತಿ ಮಾಡುವಾಗ ವಾಲ್ ಸಿಡಿದು ಕುದಿಯುವ ಕಬ್ಬಿನ ಹಾಲು ಮೈಮೇಲೆ ಬಿದ್ದು 8 ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು.

ಇಂದು ಚಿಕಿತ್ಸೆ ಫಲಕಾರಿಯಾಗದೇ ಗೋಕಾಕ್‌ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತೇಶ ಸಾರವಾಡಿ, ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್, ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ಮೃತಪಟ್ಟಿದ್ದಾರೆ. ವಿಕ್ರಂ ಇನಾಮದಾರ್, ಪ್ರಭಾಕರ್ ಕೋರೆ, ವಿಜಯ್ ಮೆಟಗುಡ್ಡ ಮೂವರ ಸಹಭಾಗಿತ್ವದಲ್ಲಿ ಈ ಕಾರ್ಖಾನೆ ನಡೆಯುತ್ತಿತ್ತು.

ಅಕ್ಷಯ್ ಚೋಪಡೆ(45), ದೀಪಕ್ ಮನ್ನೋಳ್ಳಿ(31), ಸುದರ್ಶನ ಬನೋಶಿ(25), ಭರತೇಶ್ ಸಾರವಾಡೆ(27), ಗುರು ತಮ್ಮನ್ನವರ್(26), ಮಡಿವಾಳಪ್ಪ ಕಾಜಗಾರ್(28), ಮಂಜುನಾಥ್ ತೇರದಾಳ(26) ಮೃತಪಟ್ಟಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.