ಮನೆ ಅಪರಾಧ ಹನುಮನ ಪೂಜೆಗೆ ಕೃಷ್ಣಾ ನದಿಯಿಂದ ನೀರು ತರಲು ಹೊರಟಿದ್ದವರಿಗೆ ಬೊಲೆರೊ ವಾಹನ ಡಿಕ್ಕಿ: ಮೂವರ ಸಾವು

ಹನುಮನ ಪೂಜೆಗೆ ಕೃಷ್ಣಾ ನದಿಯಿಂದ ನೀರು ತರಲು ಹೊರಟಿದ್ದವರಿಗೆ ಬೊಲೆರೊ ವಾಹನ ಡಿಕ್ಕಿ: ಮೂವರ ಸಾವು

0

ರಾಯಚೂರು: ಹನುಮನ ಪೂಜೆಗಾಗಿ ಕೃಷ್ಣಾ ನದಿಯಿಂದ ನೀರು ತರಲು ಹೊರಟಿದ್ದವರ ಮೇಲೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಹೆಗಸನಹಳ್ಳಿ ಬಳಿ ನಡೆದಿದೆ.

Join Our Whatsapp Group

ಹೆಗಸನಹಳ್ಳಿ ಗ್ರಾಮದ ಅಯ್ಯನಗೌಡ (28), ಮಹೇಶ್ (24), ಉದಯ್ ಕುಮಾರ್ (28) ಮೃತ ದುರ್ದೈವಿಗಳು.

ಭೂಷಣ್ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಏ.23) ಹುನುಮ ಜಯಂತಿ, ಹೀಗಾಗಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಕ್ಕೆ, ಪಕ್ಕದ ಕೃಷ್ಣಾ ನದಿಯಿಂದ ಬಿಂದಿಗೆಯಲ್ಲಿ ನೀರು ತರಲು ಯುವಕರು ಹೋಗುತ್ತಿದ್ದರು.

ಈ ವೇಳೆ ಕೋಳಿ ಸಾಗಿಸುತ್ತಿದ್ದ ಬೊಲೆರೊ ವಾಹನ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ವಾಹನ ಬಿಟ್ಟು ಚಾಲಕ ಮಧುಸೂದನ್ ಗೌಡ ಪರಾರಿಯಾಗಲು ಯತ್ನಿಸಿದನು. ಬೆನ್ನಟ್ಟಿದ್ದ ಗ್ರಾಮಸ್ಥರು ಚಾಲಕನನ್ನು ಹಿಡಿದಿದ್ದಾರೆ. ಬಳಿಕ ಚಾಲಕ ಮಧುಸೂದನ್​​​ ಗೌಡನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೊಲೆರೊ ವಾಹನ ತೆಲಂಗಾಣ ನೋಂದಣಿಯಾಗಿದೆ. ಪೊಲೀಸರು ಬೊಲೆರೊ ವಾಹನವನ್ನು ಜಪ್ತಿ ಮಾಡಿದ್ದಾರೆ. ಶಕ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಂದಿನ ಲೇಖನಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ ಪತನ: 10 ಮಂದಿ ಸಾವು
ಮುಂದಿನ ಲೇಖನತಿದ್ದಿಕೊಳ್ಳಲು ಈಶ್ವರಪ್ಪಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು: ಬಿ ವೈ ವಿಜಯೇಂದ್ರ