ಮುಂಬಯಿ: ಖ್ಯಾತ ಬಾಲಿವುಡ್ ಗಾಯಕ, ರ‍್ಯಾಪರ್ ಬಾದ್ ಶಾ ಒಡೆತನದ ಎರಡು ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟವಾಗಿರುವ ಘಟನೆ ಮಂಗಳವಾರ (ನ.26ರಂದು) ಮುಂಜಾನೆ ನಡೆದಿದೆ.
ಚಂಡೀಗಢದ ಸೆಕ್ಟರ್ 26 ರಲ್ಲಿರುವ ಬಾದ್ ಶಾ ಮಾಲೀಕತ್ವದ ಬಾರ್ & ಕ್ಲಬ್ ಸೆವಿಲ್ಲೆ, ಡಿ ಓರಾ ಕ್ಲಬ್ ಹೊರಗೆ ಈ ಸ್ಫೋಟ ಸಂಭವಿಸಿದೆ.
ಮಂಗಳವಾರ ಮುಂಜಾನೆ 3 ಗಂಟೆಯ ಸಮಯದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಬಾರ್ ಹೊರಗೆ ಬಾಂಬ್ ಎಸೆದು ಪರಾರಿ ಆಗಿದ್ದಾರೆ. ಸ್ಫೋಟದ ಪರಿಣಾಮ ಕ್ಲಬ್‌ನಲ್ಲಿನ ಗಾಜಿನ ಕಿಟಕಿಗಳನ್ನು ಒಡೆದು ಹೋಗಿದ್ದು, ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಈ ಘಟನೆ ಬಳಿಕ 30 ಮೀ ದೂರದಲ್ಲಿರುವ ಡಿ ಓರಾ ಕ್ಲಬ್ ಮೇಲೂ ಅದೇ ರೀತಿಯ ಬಾಂಬ್ ಎಸೆದು ಪರಾರಿ ಆಗಿದ್ದಾರೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಎಚ್ಚೆತ್ತು ಸ್ಥಳಕ್ಕೆ ಆಗಮಿಸಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧಾರಿಸಿ ತನಿಖೆಯನ್ನು ಕೈಗೊಂಡಿದ್ದಾರೆ.