ಇಂಡಿಗೋ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಕರೆ: ವ್ಯಕ್ತಿಯ ಬಂಧನ
ನವದೆಹಲಿ(NewDelhi): ಪಾಟ್ನಾ ಇಂಡಿಗೋ ವಿಮಾನ ನಿಲ್ದಾಣದಲ್ಲಿಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಸಮಯ 8.20ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಕರೆ ಬಂದ ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ.
ಇದೊಂದು ಹುಸಿ ಕರೆ ಎಂದು ಪೊಲೀಸರು ಸ್ಪಷ್ಟಪಡಿಸಿದ ಬಳಿಕ ದೆಹಲಿಗೆ ತೆರಳ ಬೇಕಿದ್ದ ವಿಮಾನ ಇಂದು ಬೆಳಿಗ್ಗೆ ದೆಹಲಿಯತ್ತ ತೆರಳಿತು.