ಮನೆ ಅಪರಾಧ ಕಲಬುರಗಿಯ ಖಾಸಗಿ ಶಾಲೆ ಬಾಂಬ್ ಬೆದರಿಕೆ ಸಂದೇಶ

ಕಲಬುರಗಿಯ ಖಾಸಗಿ ಶಾಲೆ ಬಾಂಬ್ ಬೆದರಿಕೆ ಸಂದೇಶ

0
ಸಾಂದರ್ಭಿಕ ಚಿತ್ರ

ಕಲಬುರಗಿ: ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ವಿಧಾನಪರಿಷತ್ ಸದಸ್ಯ ಬಿಜಿ ಪಾಟೀಲ್ ಒಡೆತನದ ಚಂದ್ರಕಾಂತ ಪಾಟೀಲ್ ಶಾಲೆಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿದೆ.

Join Our Whatsapp Group

ಮಧ್ಯಾಹ್ನ ಒಂದು ಗಂಟೆಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ‌ ಹಾಕಲಾಗಿದೆ.

ಸಂದೇಶ ಕಂಡ ಕೂಡಲೆ ಶಾಲೆಯ ಸಿಬ್ಬಂದಿ ಮಕ್ಕಳನ್ನು ಮನೆಗೆ ಕಳುಹಿಸಿದ್ದಾರೆ.

ಅಶೋಕ ನಗರ ಠಾಣೆ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್​ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಸಂದೇಶ ತಮಿಳುನಾಡಿನಿಂದ ಬಂದಿದೆ ಎಂದು ಶಂಕಿಸಲಾಗಿದೆ.