ಮನೆ ರಾಷ್ಟ್ರೀಯ ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ಗೆ ಬಾಂಬ್ ಬೆದರಿಕೆ..!

ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ಗೆ ಬಾಂಬ್ ಬೆದರಿಕೆ..!

0

ನವದೆಹಲಿ : ದೆಹಲಿ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ವಿಧಾನಸಭೆ ಸಂಕೀರ್ಣಕ್ಕೆ ಬೆಳಗ್ಗೆ 7:28ರ ಸುಮಾರಿಗೆ ಮೊದಲ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ.

ಇದರ ಜೊತೆಗೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್‌ಗೂ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ದೆಹಲಿಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಇಮೇಲ್‌ಗಳ ಮೂಲದ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿದೆ.