ಮನೆ ಕಾನೂನು ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಗೆ ಗರ್ಭಧಾರಣೆ ಕೊನೆಗೊಳಿಸಲು ಬಾಂಬೆ ಹೈಕೋರ್ಟ್ ನಿಂದ ಅನುಮತಿ

ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಗೆ ಗರ್ಭಧಾರಣೆ ಕೊನೆಗೊಳಿಸಲು ಬಾಂಬೆ ಹೈಕೋರ್ಟ್ ನಿಂದ ಅನುಮತಿ

0

ಮುಂಬೈ (Mumbai): ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕ ಬಾಲಕಿಗೆ ತನ್ನ 16 ವಾರಗಳ ಗರ್ಭಧಾರಣೆಯನ್ನ ಕೊನೆಗೊಳಿಸಲು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಅನುಮತಿ ನೀಡಿದೆ.

ಅವಳು ತನ್ನ ಗರ್ಭಧಾರಣೆಯನ್ನ ಮುಂದುವರಿಸಲು ಅನುಮತಿಸಿದ್ರೆ ಅದು ‘ಅವಳ ಮೇಲೆ ಹೊರೆಯಾಗುವುದಲ್ಲದೆ, ಅದು ಅವಳ ಮಾನಸಿಕ ಆರೋಗ್ಯಕ್ಕೆ ಗಂಭೀರ ಗಾಯವನ್ನ ಉಂಟು ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಕೊಲೆ ಪ್ರಕರಣದ ಆರೋಪಿಯಾಗಿರುವ ಅಪ್ರಾಪ್ತ ವಯಸ್ಕನನ್ನು ನಿರೀಕ್ಷಣಾ ಗೃಹದಲ್ಲಿ ವಶಕ್ಕೆ ಪಡೆಯಲಾಗಿದೆ.

ನ್ಯಾಯಮೂರ್ತಿಗಳಾದ ಎ.ಎಸ್. ಚಂದುರ್ಕರ್ ಮತ್ತು ಊರ್ಮಿಳಾ ಜೋಶಿ-ಫಾಲ್ಕೆ ಅವರ ವಿಭಾಗೀಯ ಪೀಠವು ಜೂನ್ 27ರಂದು ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಅನುಮತಿ ನೀಡುವಾಗ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ಅದು ‘ಸಂತಾನೋತ್ಪತ್ತಿ ಆಯ್ಕೆಯನ್ನು ಹೊಂದುವ ಮಹಿಳೆಯ ಹಕ್ಕು ಭಾರತದ ಸಂವಿಧಾನದ ಅನುಚ್ಛೇದ 21ರ ಅಡಿಯಲ್ಲಿ ಕಲ್ಪಿಸಲಾಗಿರುವಂತೆ ಅವಳ ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದೆ.

‘ಮಗುವನ್ನು ಹೆರಲು ಅವಳನ್ನ ಒತ್ತಾಯಿಸಲಾಗುವುದಿಲ್ಲ… ಮಗುವಿಗೆ ಜನ್ಮ ನೀಡಬೇಕೇ ಅಥವಾ ಬೇಡವೇ ಎಂಬ ಆಯ್ಕೆ ಆಕೆಗಿದೆ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಅಪ್ರಾಪ್ತ ಬಾಲಕಿ ಎಂಟಿಪಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಹೈಕೋರ್ಟ್ ನಡೆಸಿತು. ತನಿಖೆಯ ಸಮಯದಲ್ಲಿ, ಲೈಂಗಿಕ ಕಿರುಕುಳದಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಆರ್ಥಿಕವಾಗಿ ದುರ್ಬಲ ಹಿನ್ನೆಲೆಯಿಂದ ಬಂದಿದ್ದು, ಲೈಂಗಿಕ ಕಿರುಕುಳದಿಂದಾಗಿ ಆಘಾತಕ್ಕೆ ಒಳಗಾಗಿದ್ದಾಳೆ. ಇದರಿಂದ ಆಕೆ ಇನ್ನೂ ನರಳುತ್ತಲೇ ಇದ್ದು, ಈ ಪರಿಸ್ಥಿತಿಯಲ್ಲಿ ಮಗುವನ್ನ ಬೆಳೆಸುವುದು ಬಾಲಕಿಗೆ ಕಷ್ಟಕರವಾಗಿತ್ತೆ ಎಂದು ವಾದಿಸಲಾಗಿತ್ತು.

ಹಿಂದಿನ ಲೇಖನಕೊಡಗಿನಲ್ಲಿ 7ನೇ ಬಾರಿ ನಡುಗಿದ ಭೂಮಿ: ಜನರಲ್ಲಿ ಹೆಚ್ಚಿದ ಆತಂಕ
ಮುಂದಿನ ಲೇಖನಕಿಡ್ನಿಯ ಆರೋಗ್ಯಕ್ಕೆ ಇಲ್ಲಿವೆ ಕೆಲವು ಟಿಪ್ಸ್‌