ಮನೆ ರಾಜ್ಯ ಬಾಂಬ್ ಹಾಕುವುದೇ ಬ್ರ್ಯಾಂಡ್ ಬೆಂಗಳೂರು ಮಾದರಿಯಾಗಿದೆ: ಸಿ ಟಿ ರವಿ

ಬಾಂಬ್ ಹಾಕುವುದೇ ಬ್ರ್ಯಾಂಡ್ ಬೆಂಗಳೂರು ಮಾದರಿಯಾಗಿದೆ: ಸಿ ಟಿ ರವಿ

0

ಬೆಂಗಳೂರು: ಬಾಂಬ್ ಹಾಕುವುದೇ ಬ್ರ್ಯಾಂಡ್ ಬೆಂಗಳೂರು ಮಾದರಿಯಾಗಿದೆ.  ಬೆಂಗಳೂರನ್ನು ಬಾಂಬ್​ನಿಂದ ರಕ್ಷಣೆ ಮಾಡಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ರಾಜ್ಯಸಭೆ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆದ್ದಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದವು. ಕಾಂಗ್ರೆಸ್ ನಾಯಕರು ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಅಂದರು, ಆದರೆ ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿಟಿ ರವಿ ಹರಿಹಾಯ್ದರು.

Join Our Whatsapp Group

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆದ್ದಾಗಲೂ ಕೂಡ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವನ್ನು ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿ ಸಂಭ್ರಮಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುತ್ತಾ ಸಿಎಂ, ಡಿಸಿಎಂ, ಪರಮೇಶ್ವರ್, ದಿನೇಶ್ ಗುಂಡೂರಾವ್ ನಮ್ಮ ಕಿವಿಗೆ ಹೂ‌ವು ಮೂಡಿಸಲು ಪ್ರಯತ್ನ ಮಾಡಿದರು ಎಂದು ವಾಗ್ದಾಳಿ ಮಾಡಿದರು.

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆಯಲ್ಲಿ ಪಾಲ್ಗೊಂಡವರನ್ನು ಅಮಾಯಕರು ಎಂದು ಕಾಂಗ್ರೆಸ್ ವಕಾಲತ್ತು ವಹಿಸಿತ್ತು. ಅವರ ಪರವಾಗಿ ವಕಾಲತ್ತು ವಹಿಸಿದ ಪರಿಣಾಮ ರಾಮೇಶ್ವರಂ ಕಫೆಗೆ ಬಾಂಬ್ ಹಾಕಿದರು. ಬ್ರ್ಯಾಂಡ್​ ಬೆಂಗಳೂರು ಮಾಡುತ್ತೇವೆ ಅಂತ ಕಾಂಗ್ರೆಸ್​ ನಾಯಕರು ಅಂದರು, ಆದರೆ ಈಗ ಬಾಂಬ್ ಬೆಂಗಳೂರು ಆಗಿದೆ. ರಾಜಸ್ಥಾನಕ್ಕಿಂತ ಬೆಂಗಳೂರಿನಲ್ಲಿ ನೀರಿಗೆ ಬರ ಬಂದಿದೆ ಎಂದು ಸಿಟಿ ರವಿ ಬೇಸರ ವ್ಯಕ್ತಪಡಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ಭಯೋತ್ಪಾದಕರ ಬಾಲ ಮಾತ್ರ ಅಲ್ಲ, ತಲೆಯೂ ಕಟ್ ಆಗುತ್ತದೆ. ಬಾಂಬ್ ಹಾಕುವುದು ಬ್ರಾಂಡ್ ಬೆಂಗಳೂರು ಮಾದರಿ. ಕಾಂಗ್ರೆಸ್​ ತನ್ನ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ರಾಜ್ಯದಲ್ಲಿನ ಕಂಪನಿಗಳನ್ನು ಕೇರಳಕ್ಕೆ ಕಳುಹಿಸುತ್ತಿದ್ದಾರೆ. ಇವರ ಕಮ್ಯುನಿಸ್ಟ್ ಸ್ನೇಹಿತರು ಫುಲ್ ಖುಷಿ ಆಗಿದ್ದಾರೆ. ಹಾಗೆ ಸಂಬಂಧ ಉಳಿಸಿಕೊಳ್ಳಲು ತಮಿಳುನಾಡಿಗೂ ಸಹಕಾರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ, ಆರ್​ ಎಸ್​ ಎಸ್ ವಿಷವಿದ್ದಂತೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಾರು ವಿಷ, ಯಾರು ಹಾಲು-ಜೇನು ಎಂಬುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತಷ್ಟು ಹೀನಾಯ ಸ್ಥಿತಿ ತಲುಪಲಿದೆ. ಕಾಂಗ್ರೆಸ್ ದಿಕ್ಕಿಲ್ಲದ ಪರಿಸ್ಥಿತಿಗೆ ತಲುಪಲಿದೆ. ​ಕಚೇರಿಯಲ್ಲಿ ದೀಪ ಹಚ್ಚುವವರು ಇಲ್ಲದ ಸ್ಥಿತಿ ಕಾಂಗ್ರೆಸ್ ಬರಲಿದೆ ಎಂದು ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.