ಬೋನಾಳ ಪಕ್ಷಿಧಾಮವು ಬೋನಾಳ ಸರೋವರವದ ದಂಡೆಯಲ್ಲಿರುವ ಸುರಪುರ ಎಂಬ ಊರಿನ ಬೋನಾಳ ಎಂಬ ಚಿಕ್ಕ ಹಳ್ಳಿಯಲ್ಲಿ ಇದೆ. ಕರ್ನಾಟಕದ ರಂಗನಾತಿಟ್ಟು ಪಕ್ಷಿಧಾಮದ ನಂತರ ಇದು ಎರಡನೇ ಅತಿದೊಡ್ಡ ಪಕ್ಷಿಧಾಮವಾಗಿದೆ. ಈ ಪಕ್ಷಿಧಾಮವನ್ನು 17ನೇ ಶತಮಾನದಲ್ಲಿ ಸುರಪುರದ ರಾಜ ಪಾಮ ನಾಯಕ ಕಟ್ಟಿಸಿದ್ದಾನೆ ಎಂದು ನಂಬಲಾಗಿದೆ. ಕಲ್ಲಿನ ಗುಡ್ಡಗಳಿಂದ ಆವೃತವಾಗಿರುವ ಈ ಸರೋವರಕ್ಕೆ ವಲಸೆ ಹಕ್ಕಿಗಳು ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಭೇಟಿ ನೀಡುತ್ತವೆ.
ಬೋನಾಳ ಪಕ್ಷಿಧಾಮಕ್ಕೆ ಭೇಟಿ ನೀಡಲು ಕಾರಣಗಳು:
ನೂರಕ್ಕೂ ಹೆಚ್ಚು ವಿವಿಧ ಜಾತಿಯ ವಲಸೆ ಹಕ್ಕಿಗಳು ಬೋನಾಳ ಸರೋವರವನ್ನು ಭೇಟಿ ನೀಡುತ್ತದೆ
ಬೋನಾಳ ಸರೋವರಕ್ಕೆ ಆಗಾಗ ಬರುವ ಪಕ್ಷಿಗಳಲ್ಲಿ ನೇರಳೆ ಬಣ್ಣದ ಹೆರಾನ್, ಬಿಳಿ ಕುತ್ತಿಗೆಯ ಕೊಕ್ಕರೆ, ಬಿಳಿ ಐಬಿಸ್, ಕಪ್ಪು ಐಬಿಸ್, ಬಾರ್-ಹೆಡೆಡ್ ಗೂಸ್, ಹಾವಿನ ಹಕ್ಕಿ, ನೇರಳೆ ಮೂರ್ಹೆನ್, ಇಂಡಿಯನ್ ಮೂರ್ಹೆನ್, ದೊಡ್ಡ ಎಗ್ರೆಟ್, ಪಾಂಡ್ ಹೆರಾನ್ ಮತ್ತು ಕ್ಯಾಟಲ್ ಎಗ್ರೆಟ್ ಮತ್ತು ಇನ್ನಿತರ ಪಕ್ಷಿಗಳನ್ನು ನೋಡಬಹುದು
700 ಎಕರೆ ಜಲಮೂಲದ ಸುತ್ತಲೂ ವಿಶಾಲವಾದ ಕೃಷಿ ಭೂಮಿಯನ್ನು ಮತ್ತು ಕಲ್ಲಿನ ಬೆಟ್ಟಗಳಿಂದ ಕೂಡಿದೆ
ಬೋನಾಳ ಪಕ್ಷಿಧಾಮದ ಸುತ್ತ ಪಾರ್ಕ್ ಗಳನ್ನು ಮತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ರಾಜ್ಯಸರ್ಕಾರವು ನಿರ್ಧರಿಸಿದೆ.
ಮಲಗಿರುವ ಬುದ್ಧನ ಬೆಟ್ಟ:
ಬೋನಾಳ ಪಕ್ಷಿಧಾಮದಿಂದ 45 ಕಿಲೋಮೀಟರ್ ದೂರದಲ್ಲಿ ಮತ್ತು ಯಾದಗಿರಿಯಿಂದ 40 ಕಿಲೋಮೀಟರ್ ದೂರದಲ್ಲಿ ಮಲಗಿರುವ ಬುದ್ಧನ ಬೆಟ್ಟವಿದೆ. ಈ ಬೆಟ್ಟದ ವಿಶಿಷ್ಟತೆ ಏನೆಂದರೆ ಈ ಬೆಟ್ಟವು ನಾಲ್ಕು ಸಣ್ಣ ಸಣ್ಣ ಬೆಟ್ಟಗಳಿಂದ ಕೂಡಿದ್ದು ಬುದ್ಧನು ಮಲಗಿದಾಗ ಯಾವ ರೀತಿ ಕಾಣುವನೋ ಅದೇ ರೀತಿಯ ಆಕಾರವನ್ನು ಇದು ಹೊಂದಿದೆ. ನೀವು ಯಾವಾಗಲಾದರೂ ಯಾದಗಿರಿಗೆ ಹೋಗಿದ್ದಾಗ ಮಲಗಿರುವ ಬುದ್ಧನ ಬೆಟ್ಟಕ್ಕೆ ತಪ್ಪದೆ ಭೇಟಿ ನೀಡಿ.
ಸುತ್ತಮುತ್ತ ವೀಕ್ಷಿಸಬಹುದಾದ ಸ್ಥಳಗಳು:
ಯಾದಗಿರಿ ಕೋಟೆ (65 ಕಿಲೋಮೀಟರ್ ),ಮಲಗುವ ಬುದ್ಧನ ಬೆಟ್ಟ (45 ಕಿಲೋಮೀಟರ್), ಬಸವಸಾಗರ ಅಣೆಕಟ್ಟು (73 ಕಿಲೋಮೀಟರ್) ಇವು ಬೋನಾಳ ಪಕ್ಷಿಧಾಮದ ಜೊತೆ ಭೇಟಿ ನೀಡಬಹುದಾದ ಕೆಲವು ತಾಣಗಳು.