ಮನೆ ಆರೋಗ್ಯ ಮೂಳೆ ಮತ್ತು ಕೀಲುಗಳ ಸಮಸ್ಯೆಗಳು

ಮೂಳೆ ಮತ್ತು ಕೀಲುಗಳ ಸಮಸ್ಯೆಗಳು

0

ಸ್ಪೈನಾ ಬೈಫಿಟಾ :-

ಹುಟ್ಟಿನಿಂದಲೇ ಬೆನ್ನುಹುರಿಯಾ ಮಧ್ಯಾದಲ್ಲಿ ಸ್ಥಲಾವಕಾಶಉಂಟಾಗುತ್ತದೆ. ಈ ಜಾಗದಲ್ಲಿ ಬೆನ್ನು ಹುರಿಯ ಮೇಲಿರುವ ಪೊರೆ ಹೊರಕ್ಕೆ ತಳಲ್ಪಡುತ್ತದೆ. ಆ ಪೊರೆಯೊಂದಿಗೆ ಅದರಲ್ಲಿರುವ ನರಗಳೂ ಕೂಡ ಹೊರಕ್ಕೆ ಬರುತ್ತದೆ. ಹೀಗೆ ಸೊಂಟದ ಬಳಿ ಬೆನ್ನುಹುರಿಯ ಪೊರೆ ಮತ್ತು ನರಗಳು ಹೊರಚಾಚುವುದನ್ನು ಮೈಲೋಮೆನಿಂಗ್ ಸೀಲ್ ಎನ್ನುತ್ತಾರೆ. ಈ ತೊಂದರೆ ಪ್ರತಿ ಸಾವಿರ ಮಕ್ಕಳಲ್ಲಿ  ಇಬ್ಬರು-ಮೂವರಿಗಿರುತ್ತದೆ. ಹಿಂದಿನ ಕಾಲದಲ್ಲಿ ಸ್ಟೈನಾ ಬೈಫಿಡಾ ದೋಷವಿದ್ದ ಅಧಿಕ ಸಂಖ್ಯೆಯ ಮಕ್ಕಳು ಸೋಂಕುಂಟಾಗಿ ಸಾವಿಗೀಡಾಗುತ್ತಿದ್ದರು. ಇತ್ತೀಚೆಗೆ ನ್ಯೂರೋಸರ್ಜರಿ ಆವಿಷ್ಕಾರದಿಂದಾಗಿ ಆ ಸಮಸ್ಯೆಯಿಂದ ಸಾಯುವವರ ಸಂಖ್ಯೆ ಇಳಿಮುಖವಾಗಿದೆ. ಸ್ಟೈನಾ ಬೈಫಿಟಾ ಇದ್ದಾಗ ಎಷ್ಟು ಶೀಘ್ರಾವಾಗಿ ಸರ್ಜರಿಮಾಡಿದರೆ ಅಷ್ಟರಮಟ್ಟಿಗೆ ಮರಣಸಂಭವ ಕಡಿಮೆಯಾಗುತ್ತದೆ.

Join Our Whatsapp Group

ಎರ್ಬ್ಸ್ ಪಾಲಸಿ :-

ಎರ್ಬ್ಸ್ ಪಾಲಸಿಯನ್ನು ಹೆರಿಗೆಯಲ್ಲಿ ಬರುವ ಪಾರ್ಶ್ವಾವಾಯು ಎನ್ನುತ್ತಾರೆ.  ಹೆರಿಗೆ ಕಾಲದ ಕಷ್ಟವಾಗಿ ಹುಟ್ಟಿದ ಮಕ್ಕಳ ಒಂದು ಕೈಯಾಗಲೀ, ಕಾಲಾಗಲೀ ನಿಷ್ಕ್ರಿಯವಾಗಿರುತ್ತದೆ. ಮುಖ್ಯವಾಗಿ ಪಿರ್ರೆಗಳು ಮೊದಲು ಬಂದು (ಬ್ರಿಜ್ ಡೆಲಿವರಿ) ಹೆರಿಗೆ ಆದವರ ತಲೆ ಮತ್ತು ಭುಜ ಎಳೆದು ಬಲಂತವಾಗಿ ಹೆರಿಗೆ ಮಾಡಿದರೆ, ಅಬ್ಸೆಟ್ರೆಕ್ಸ್ ಪೆರಲಾಸಿಸ್ ಸಂಭವಿಸುತ್ತದೆ. ಹೀಗೆ ಬಂದಾಗ ಪೆರಾಲಾಸಿಸ್ 3-4 ತಿಂಗಳಿಗೆ ಸ್ವಲ್ಪ ಕಡಿಮೆ ಆಗುತ್ತದೆ.

ಗರ್ಭದಲ್ಲಿರುವ ಮಗುವಿನ ದಿಕ್ಕು ಸರಿಯಾಗಿಲ್ಲದಿದ್ದಾಗ ಸೂಕ್ತ ನಿರ್ಣಯ ತೆಗೆದುಕೊಂಡು ಸಿಸೇರಿಯನ್ ಮಾಡಿದರೆ ಇಂತಹ ಸಮಸ್ಯೆಗಳಾಗುವುದಿಲ್ಲ.

ಕ್ಲಬ್ ಪುಟ್ :-

ಕೆಲವು ಮಕ್ಕಳು ಹುಟ್ಟಿದಾಗಲೇ ಅವರ ಪಾದಗಳು ಮಾಮೂಲಿನಂತಿರದೇ ಮೇಲಕ್ಕೆ ಅಥವಾ ಪಕ್ಕಕ್ಕೆ ತಿರುಚಿ ತೆಗೆದುಕೊಂಡಿರುತ್ತದೆ. ಇಂತಹ ಸಮಸ್ಯೆಗಳನ್ನು ಕ್ಲಬ್ ಪುಟ್ ಎನ್ನುತ್ತಾರೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು. ತಡ ಮಾಡಿದರೆ ಮತ್ತಷ್ಟು ಸೊಟ್ಟಾಗುತ್ತದೆ ಇದನ್ನು ಔಷದೋಪಚಾರದಿಂದ ಸರಿಪಡಿಸಲಾಗುವುದಿಲ್ಲ. ಹುಟ್ಟಿದ 2-3 ದಿನಗಳಲ್ಲಿ ಪಾದವನ್ನು ಸರಿಯಾಗಿರುವಂತೆ ಮಸಾಜ್ ಮಾಡುತ್ತಿರಬೇಕು. ಹೀಗೆ ಮಾಡುವುದಕ್ಕೆ ಫುಟ್ ಸ್ಟ್ರೆಚ್ಚಿಂಗ್ ಮತ್ತು ಸ್ಪ್ಲಿಂಟಿಂಗ್ ಎನ್ನುತ್ತಾರೆ. ವಾರ ವಾರವು ಸ್ಟ್ರೆಚ್ಚಿಂಗ್ ಮತ್ತು ಸ್ಪ್ಲಿಂಟಿಂಗ್ ಗಳನ್ನ ಸರಿಪಡಿಸುತ್ತಿರಬೇಕು. ಅದು ತನ್ನ ಸ್ಥಾನಕ್ಕೆ ಬರೆದಿದ್ದರೆ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬೇಕಾಗುತ್ತದೆ…….

ಮಕ್ಕಳ ಮೂಳೆಮುರಿತ :-

ದೊಡ್ಡವರ ಮೂಳೆ ಮುರಿತಕ್ಕೂ, ಮಕ್ಕಳ ಮೂಳೆ ಮುರಿತಕ್ಕೂ ವ್ಯತ್ಯಾಸವಿದೆ. ಮಕ್ಕಳಿಗೆ ಮೂಳೆಮುರಿದಾಗ ಗ್ರೋತ್ ಪ್ಲೇಟ್ ಬಳಿ ಡ್ಯಾಮೇಜ್ ಅದರೆ ಮೂಳೆಯ ಬೆಳವಣಿಗೆಯಲ್ಲಿ ದೋಷ ಉಂಟಾಗುತ್ತದೆ. ಮಕ್ಕಳ ಮೂಳೆ ಮುರಿದಾಗ ಕೀಲುಗಳಿಗೆ ಪೆಟ್ಟಾಗ ತಡ ಮಾಡದೆ ಸರಿಪಡಿಸಬೇಕು.