ಕುವೈತ್ ಸಿಟಿ: ಭಾರತದ ಆಡಳಿತ ಪಕ್ಷದ ನಾಯಕಿಯೊಬ್ಬರು ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಕುವೈತ್ ಸೂಪರ್ ಮಾರ್ಕೆಟ್ ವೊಂದು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದೆ.
ಅಲ್-ಅರ್ದಿಯಾ ಕೋ-ಆಪರೇಟಿವ್ ಸೊಸೈಟಿ ಅಂಗಡಿಯ ಕಾರ್ಮಿಕರು ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿದ್ದು, ಭಾರತೀಯ ಚಹಾ ಮತ್ತು ಇತರ ಉತ್ಪನ್ನಗಳನ್ನು ಟ್ರಾಲಿಗಳಲ್ಲಿ ರಾಶಿ ಹಾಕಿ ಪ್ರತಿಭಟಿಸಿದ್ದಾರೆ.
ಸೌದಿ ಅರೇಬಿಯಾ, ಕತಾರ್ ಮತ್ತು ಇತರ ದೇಶಗಳು, ಕೈರೋದ ಪ್ರಭಾವಿ ಅಲ್-ಅಜರ್ ವಿಶ್ವವಿದ್ಯಾಲಯ, ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ಖಂಡಿಸಿವೆ.
ಕುವೈತ್ ಸಿಟಿಯ ಹೊರಗಿರುವ ಸೂಪರ್ ಮಾರ್ಕೆಟ್‌ನಲ್ಲಿ ಭಾರತದ ಅಕ್ಕಿಯ ಚೀಲಗಳು ಮತ್ತು ಮಸಾಲೆಗಳು, ಮೆಣಸಿನಕಾಯಿ ಹಾಗೂ ಇತರ ಉತ್ಪನ್ನಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ. ಅಲ್ಲದೆ “ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದ್ದೇವೆ” ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ.