ತಮಿಳುನಾಡು: ಸೆಪ್ಟಿಕ್ ಟ್ಯಾಂಕ್ ನಲ್ಲಿ 9 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಈ ಘಟನೆ ಸಂಬಂಧ ಅಪ್ರಾಪ್ತ ಬಾಲಕನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮದುರೈನಲ್ಲಿ ಉರ್ದು ಪ್ರಚಾರ ಸಂಸ್ಥೆಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕನನ್ನು ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಸೆಪ್ಟಿಕ್ ಟ್ಯಾಂಕ್ ನಿಂದ ಹೊರತೆಗೆಯಲಾಗಿದೆ.
ಬಾಲಕ ಬಿಹಾರ ಮೂಲದವರಾಗಿದ್ದು, ಇತರ 11 ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯಲ್ಲಿ ಓದುತ್ತಿದ್ದ. ಮಧುರೈನ ಕಥಾಪಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂಬತ್ತು ವರ್ಷದ ಬಾಲಕ ನಾಪತ್ತೆಯಾಗಿದ್ದ ಕಾರಣ ಸಂಸ್ಥೆಯ ವಾರ್ಡನ್ ಶನಿವಾರ (ಮೇ 25) ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಕೂಡಲೇ ತನಿಖೆಯನ್ನು ಪ್ರಾರಂಭಿಸಿದರು, ಎಲ್ಲೆಡೆ ಹುಡುಕಾಡಿದಾಗ ಸೆಪ್ಟೆಕ್ ಟ್ಯಾಂಕ್ ನಲ್ಲಿ ಮೊದಲು ತಲೆ ಕಾಣಿಸಿತ್ತು, ಬಳಿಕ ದೇಹವನ್ನು ಹೊರತೆಗೆಯಲಾಗಿದೆ. ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ಇರಿತದ ಗಾಯಗಳಿದ್ದವು.
ಪೊಲೀಸ್ ಮೂಲಗಳ ಪ್ರಕಾರ, 9 ವರ್ಷದ ಬಾಲಕ 13 ವರ್ಷದ ಬಾಲಕನೊಂದಿಗೆ ಜಗಳವಾಡಿದ್ದ, ಅವನು ಕೂಡ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಯಾಗಿದ್ದ, 13 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆ ಬಾಲಕನೇ ಹತ್ಯೆ ಮಾಡಿದ್ದಾನೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.