ಮನೆ ರಾಜ್ಯ ಬಿಪಿಎಲ್ ಕಾರ್ಡ್‌ ಪರಿಷ್ಕರಣೆ; ಕಾರ್ಡ್ ಡಿಲೀಟ್, 3 ತಿಂಗಳಿಂದ ಅಕ್ಕಿ ಸಿಗದೇ ಜನ ಪರದಾಟ

ಬಿಪಿಎಲ್ ಕಾರ್ಡ್‌ ಪರಿಷ್ಕರಣೆ; ಕಾರ್ಡ್ ಡಿಲೀಟ್, 3 ತಿಂಗಳಿಂದ ಅಕ್ಕಿ ಸಿಗದೇ ಜನ ಪರದಾಟ

0

ಬೆಂಗಳೂರು : ಬೆಂಗಳೂರು ನಗರದಲ್ಲಿ 80 ಸಾವಿರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಆಗುತ್ತಿದ್ದು, ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾಗುತ್ತಿವೆ. ಕಾರ್ಡ್ ಡಿಲೀಟ್ ಆಗಿದ್ದಕ್ಕೆ ಮಹಿಳೆಯರು ಕಣ್ಣೀರು ಹಾಕಿ, ಅಳಲು ತೊಡಿಕೊಂಡಿದ್ದಾರೆ. ಅಕ್ಕಿ ಸಿಗ್ತಿಲ್ಲ ಅಂತಾ ಆಹಾರ ಇಲಾಖೆಗೆ ಪ್ರತಿದಿನ ಅಲೆದಾಡುತ್ತಿದ್ದಾರೆ.

ಸ್ವಂತ ಮನೆ, ತೆರಿಗೆ ಪಾವತಿ, ಮೂರು ಎಕರೆ ಜಮೀನು ಆದಾಯ ಮೂಲ ಆಧರಿಸಿ ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಆಗುತ್ತಿದೆ. ಕೇಂದ್ರ ಸರ್ಕಾರ ಬೆಂಗಳೂರಿನಾದ್ಯಂತ ಸುಮಾರು 80 ಸಾವಿರ ಕಾರ್ಡ್‌ಗಳನ್ನು ಡಿಲೀಟ್ ಮಾಡಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ 80 ಸಾವಿರ ಕಾರ್ಡ್‌ಗಳಿಗೆ ಅಕ್ಕಿ ಸಿಗುತ್ತಿಲ್ಲ.

ಅಕ್ಕಿ ಸಿಗದೆ ಡಿಲೀಟ್ ಆದ ಕಾರ್ಡ್‌ದಾರರು ರಾಜಾಜಿನಗರದ ಆಹಾರ ಇಲಾಖೆಗೆ ಭೇಟಿ ಕೊಡುತ್ತಿದ್ದಾರೆ. ನೂರಾರು ಮಹಿಳೆಯರು ಬಿಪಿಎಲ್ ಕಾರ್ಡ್ ಹಿಡಿದು ನಾವು ತೆರಿಗೆ ಪಾವತಿ ಮಾಡುತ್ತಿಲ್ಲ, ಭೂಮಿ ಇಲ್ಲ, ಸ್ವಂತ ಮನೆಯಿಲ್ಲ ಅಂತಾ ಸ್ಪಷ್ಟನೆ ಕೊಟ್ಟರೂ ಅಧಿಕಾರಿಗಳು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯನಗರ, ಸುಂಕದ ಕಟ್ಟೆ, ಲಗ್ಗೆರೆ, ಕಾಮಾಕ್ಷಿ ಪಾಳ್ಯ, ಅಗ್ರಹಾರ ದಾಸರಹಳ್ಳಿ ಸೇರಿದಂತೆ ಹಲವು ಏರಿಯಾಗಳಿಂದ ನಿವಾಸಿಗಳು ಕಾರ್ಡ್‌ಗಳನ್ನು ಹಿಡಿದು ದಾಖಲೆ ಸಮೇತ ಸ್ಪಷ್ಟನೆ ಕೊಡುವುದಕ್ಕೆ ಮುಂದಾಗುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಡಿಲೀಟ್ ಆಗಿರುವ ಕಾರ್ಡ್‌ಗಳನ್ನು ವಾಪಾಸ್ ನೀಡುವಂತೆ ಸರ್ಕಾರಕ್ಕೆ ಜನರು ಒತ್ತಾಯಿಸಿದ್ದಾರೆ.

ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್‌ಗೆ ಸೂಕ್ತ ಸಾಕ್ಷ್ಯ, ಮಾಹಿತಿ, ದಾಖಲೆ ಆಧರಿಸಿಯೇ ಶಿಫ್ಟ್ ಮಾಡುತ್ತಿದ್ದೇವೆ ಎಂದು ಆಹಾರ ಇಲಾಖೆ ಹೇಳುತ್ತಿದೆ. ಆದರೆ, ಸರ್ಕಾರದ ವಿರುದ್ಧ ಜನರ ಆಕ್ರೋಶ ಹೊರಹಾಕಿದ್ದಾರೆ.