ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2826 ಟ್ರೇನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಫೆಬ್ರವರಿ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್’ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಹುದ್ದೆಯ ಮಾಹಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 314
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- 628
ಆಫೀಸ್ ಅಸಿಸ್ಟೆಂಟ್-314
ಟ್ರೇನರ್- 942
ಮಲ್ಟಿ ಟಾಸ್ಕಿಂಗ್ ಸ್ಟಾಫ್- 628
ವಿದ್ಯಾರ್ಹತೆ:
ಸೆಂಟ್ರಲ್ ಸೂಪರಿಂಟೆಂಡೆಂಟ್- ಪದವಿ
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- ಪಿಯುಸಿ
ಆಫೀಸ್ ಅಸಿಸ್ಟೆಂಟ್- ಪಿಯುಸಿ
ಟ್ರೇನರ್- ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್- ಪಿಯುಸಿ
ವಯೋಮಿತಿ:
ಸೆಂಟ್ರಲ್ ಸೂಪರಿಂಟೆಂಡೆಂಟ್- 25 ರಿಂದ 45 ವರ್ಷ
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- 21 ರಿಂದ 40 ವರ್ಷ
ಆಫೀಸ್ ಅಸಿಸ್ಟೆಂಟ್- 21 ರಿಂದ 40 ವರ್ಷ
ಟ್ರೇನರ್- 21 ರಿಂದ 40 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್- 21 ರಿಂದ 30 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಸೆಂಟ್ರಲ್ ಸೂಪರಿಂಟೆಂಡೆಂಟ್- ವೇತನ 18,000 ರೂ.
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್-ವೇತನ 15,000 ರೂ.
ಆಫೀಸ್ ಅಸಿಸ್ಟೆಂಟ್-ವೇತನ 12,000 ರೂ.
ಟ್ರೇನರ್- ವೇತನ 15,000 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- ವೇತನ 10,000 ರೂ.
ಆಯ್ಕೆ ಪ್ರಕ್ರಿಯೆ:
ಆನ್’ಲೈನ್ ಟೆಸ್ಟ್
ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 5, 2023
ಅರ್ಜಿ ಶುಲ್ಕ:
ಸೆಂಟ್ರಲ್ ಸೂಪರಿಂಟೆಂಡೆಂಟ್- 945 ರೂ.
ಅಸಿಸ್ಟೆಂಟ್ ಸೆಂಟ್ರಲ್ ಸೂಪರಿಂಟೆಂಡೆಂಟ್- 828 ರೂ.
ಆಫೀಸ್ ಅಸಿಸ್ಟೆಂಟ್- 708 ರೂ.
ಟ್ರೇನರ್- 591 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್- 472 ರೂ.
ಪಾವತಿಸುವ ಬಗೆ- ಆನ್’ಲೈನ್