ನೆಲಮಂಗಲ: ಲೋಕಾಯುಕ್ತ ಕಚೇರಿಗೆ ಅಕ್ರಮದ ಸಾಕಷ್ಟು ದೂರುಗಳು ಬಂದ ಕಾರಣ ನೆಲಮಂಗಲದ ಹಲವು ಕಡೆಗಳಲ್ಲಿ ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯಕ್ತ ನ್ಯಾ. ವೀರಪ್ಪ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, 14 ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟಿರುವೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮಗೆ ಸುಮಾರು ದಾಖಲೆಗಳು ಸಿಕ್ಕಿವೆ. ಅವುಗಳ ಬಗ್ಗೆ ತನಿಖೆ ಮಾಡಲಾಗುತ್ತದೆ. ನೆಲಮಂಗಲ ನಗರಸಭೆ, ತಾಲೂಕು ಕಚೇರಿಯ ಸಿಬ್ಬಂದಿ ಆನ್ಲೈನ್ ಮೂಲಕ ಲಂಚದ ಹಣ ತಗೊಂಡಿದ್ದಾರೆ, ಹಣದ ಮೂಲ ಕೇಳಿದರೆ ಹೇಳುತ್ತಿಲ್ಲ ಎಂದರು.
ಮೊದಲ ಬಾರಿಗೆ ಪೊಲೀಸ್ ಠಾಣೆಗಳಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಜನರು ಮುಂದೆ ಬಂದು ಅನ್ಯಾಯವನ್ನು ಖಂಡಿಸಬೇಕು. ಕ್ಯಾನ್ಸರ್ನ ವಾಸಿ ಮಾಡಬಹುದು, ಆದರೆ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ ಎನ್ನುವಂತಿದೆ ಪರಿಸ್ಥಿತಿ. ಸರ್ಕಾರದ ಕೆಲಸವನ್ನು ದೇವರ ಕೆಲಸ ಎಂದು ಭಾವಿಸಿ ಜನ ಸಾಮಾನ್ಯರ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
Saval TV on YouTube