ಬಜಾಜ್ ನ ಸ್ಟೈಲಿಶ್ ಹೈ ಸ್ಪೀಡ್ ಮೋಟಾರ್ ಬೈಕ್ ಕಂಡ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಒಂದು ಕಾಲದಲ್ಲಿ ಪಲ್ಸರ್ ಯಾವ ಮಟ್ಟಕ್ಕೆ ಹೆಸರು ಮಾಡಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಎನ್ ಎಸ್160 ಬೈಕ್ ಅಂದ್ರೆ ಯುವಕರಿಗೆ ಸಖತ್ ಇಷ್ಟ.
ಈ ಆಕರ್ಷಕ ಮೋಟಾರ್ ಸೈಕಲ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಪೂರ್ವ ಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಡಿಸೈನ್ ಹೊಂದಿದೆ.
ಇದರಿಂದ ದೂರ ಪ್ರಯಾಣಿಸಿದರೂ ಸವಾರರಿಗೆ ಸುಸ್ತು ಅನ್ನಿಸುವುದಿಲ್ಲ. ಈ ಉತ್ಸಾಹಭರಿತ ಬೈಕ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಲಭ್ಯವಿದೆ. ಈ ಬೈಕ್ ನಲ್ಲಿ 160.3 ಸಿಸಿ ಎಂಜಿನ್ ನೀಡಲಾಗಿದೆ.
ಬಜಾಜ್ ಪಲ್ಸರ್ NS160 ಆರಂಭಿಕ ಬೆಲೆ ರೂ. 1,46,527. ಬೈಕ್ ನ ಒಟ್ಟು ತೂಕ 151 ಕೆ.ಜಿ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಪಡೆಯುತ್ತದೆ. ಇದು 2 ರೂಪಾಂತರಗಳು ಮತ್ತು 6 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಬಜಾಜ್ ಪಲ್ಸರ್ NS160 12-ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆಯುತ್ತದೆ. ಬೈಕ್ ನ ಸೀಟ್ ಎತ್ತರ 805 ಎಂಎಂ. ಇದರ ಉನ್ನತ ರೂಪಾಂತರವು 1,61,219ರೂಪಾಯಿಂದ ಪ್ರಾರಂಭವಾಗುತ್ತದೆ. ಈ ಬೈಕ್ ಭಾರತ್ ಸ್ಟೇಜ್ 6 (BS 6) ಮಾದರಿಗೆ ಸೇರಿದೆ.
ಈ ಬೈಕ್ ಮಾರುಕಟ್ಟೆಯಲ್ಲಿ TVS Apache RTR 160 4V ಮತ್ತು Hero Xtreme 160R ನೊಂದಿಗೆ ಸ್ಪರ್ಧಿಸುತ್ತದೆ. ಸುರಕ್ಷತೆಗಾಗಿ, ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್, ಗೇರ್ ಸ್ಥಾನ ಸೂಚಕ, ನೈಜ-ಸಮಯದ ಇಂಧನ ಆರ್ಥಿಕತೆ, ಹ್ಯಾಲೊಜೆನ್ ಹೆಡ್‌ಲೈಟ್, ಟರ್ನ್ ಇಂಡಿಕೇಟರ್ ಗಳು, ಬ್ಯಾಕ್ ಲಿಟ್ ಸ್ವಿಚ್ ಗಿಯರ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
15,000 ಡೌನ್ ಪೇಮೆಂಟ್ ಮಾಡಿ ನೀವು ಈ ಬೈಕ್ ಖರೀದಿಸಬಹುದು. ಉಳಿದ ಮೊತ್ತವನ್ನು ಮೂರು ವರ್ಷಗಳವರೆಗೆ ತಿಂಗಳಿಗೆ ಶೇ.9.7 ರಷ್ಟು ಪಾವತಿಸಬಹುದು. 4,337 ಸಾವಿರ ಕಂತುಗಳಲ್ಲಿ ಪಾವತಿಸಬೇಕು. ಸಾಲದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಕಂಪನಿಯ ಹತ್ತಿರದ ಶೋರೂಮ್ ಗೆ ಭೇಟಿ ನೀಡಬೇಕು.