ಮನೆ ರಾಜ್ಯ ಕೆಟ್ಟು ನಿಂತ ಕಾರು: ಸಹಾಯ ಮಾಡಲು ತೆರಳಿದ್ದ ಹೆಡ್ ಕಾನ್ಸ್ ಟೇಬಲ್ ಸಾವು                     

ಕೆಟ್ಟು ನಿಂತ ಕಾರು: ಸಹಾಯ ಮಾಡಲು ತೆರಳಿದ್ದ ಹೆಡ್ ಕಾನ್ಸ್ ಟೇಬಲ್ ಸಾವು                     

0

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಚಿಕ್ಕಜಾಲ ಸಮೀಪ ಕಾರು ಡಿಕ್ಕಿಯಾಗಿ ಪೊಲೀಸ್ ಕಾನ್ಸ್ ಟೇಬಲ್ ಮೃತಪಟ್ಟ ಘಟನೆ ನಡೆದಿದೆ.       

Join Our Whatsapp Group

ಮೃತಪಟ್ಟವರು ದೇವನಹಳ್ಳಿ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಸುರೇಶ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇನ್ಸ್ಪೆಕ್ಟರ್ ಧರ್ಮೇಗೌಡ ಪಾರಾಗಿದ್ದಾರೆ.                    

ಅಪಘಾತದ ರಭಸಕ್ಕೆ ಕಾನ್ಸ್ ಟೇಬಲ್ ಸುರೇಶ್ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಚಾಲಕನ ಕೈ, ಕಾಲು ಮುರಿದಿವೆ. ಫೋನ್ ಕಾಲ್ ನಲ್ಲಿ ಮಾತನಾಡಲು ಸೈಡಿಗೆ ಹೋಗಿದ್ದ ಇನ್ಸ್ಪೆಕ್ಟರ್ ಪಾರಾಗಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕ, ಯುವತಿಯರಿಗೂ ಗಂಭೀರ ಗಾಯಗಳಾಗಿವೆ.

ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಹಾವೇರಿ: ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಆತ್ಮಹತ್ಯೆ
ಮುಂದಿನ ಲೇಖನಜುಲೈ 14 ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ: ಲಕ್ಷ್ಮೀ ಹೆಬ್ಬಾಳ್ಕರ್