ಶ್ವಾಸಕೋಶಗಳಿಗೆ ಆಮ್ಲಜನಕವನ್ನು ಕೊಂಡೊಯ್ಯುವ ಶ್ವಾಸನಾಳಗಳಿಗೆ ಸೋಂಕು ತಗಲಿದಲ್ಲಿ ಅದನ್ನು ಬ್ರಾಕೇಟಿಸ್ ಎನ್ನುತ್ತಾರೆ. ಇದು ಬ್ಯಾಕ್ಟೀರಿಯದಿಂದ ಬರಬಹುದು. ಕೆಲವು ಬಾರಿ ನೆಗಡಿಯ ನಂತರ ಬರಬಹುದು.(Acute Bronchitis) ಇಲ್ಲವೇ ಇಡೀ ವರ್ಷ ಆಗಾಗ್ಗೆ ಬರಬಹುದು.(Chronic Bronchitis) ದೀರ್ಘಕಾಲದ ವರೆಗೆ ತೊಂದರೆಯಾದರೆ ಶ್ವಾಸನಾಳಗಳು ಶ್ವಾಸಕೋಶಗಳು ಭಾವಿಸಲ್ಪಡುತ್ತವೆ.
ಈ ಬ್ರಾಂಕೈಟಿಸ್ ಕೆಲವರಿಗೆ ಅನಾಯಾಸವಾಗಿ ಸೋಂಕಿದರೆ, ಮತ್ತೆ ಕೆಲವರಿಗೆ ಕಾಡುವುದೇ ಇಲ್ಲ ಕಾರಣವೇನು ತಿಳಿಯದು. ಸ್ತ್ರೀಯರಿಗಿಂತ ಪುರುಷರಿಗೆ ಈ ಕಾಯಿಲೆ ಬರುವುದು ಹೆಚ್ಚು. ಇದು 1:10ರ ಪ್ರಮಾಣದಲ್ಲಿರಬಹುದು. ಸಿಗರೇಟು, ಬಿಡಿ ಸೇದುವವರಿಗೆ ಬರುವುದು ಹೆಚ್ಚು ಶೇಕಡ 50ರಷ್ಟು ಹೊರಡುವ ಸಾಧ್ಯತೆ ಇದೆ.
ಲಕ್ಷಣಗಳು:
• ಎಡೆಬಿಡದ ಕೆಮ್ಮು.
• ಉಸಿರಾಡಿದಾಗ ಬೆಕ್ಕು ಕೂಗಿದಂತಹ ಶಬ್ದವಿರುತ್ತದೆ.
• ಕಫದಲ್ಲಿ ನೀವು ತರಹ ಇದ್ದು ತಿಳಿ ಹಸಿರು ಅಥವಾ ಹಳದಿ ಬಣ್ಣವಿದ್ದು ಅಂಟಂಟಾಗಿರುತ್ತದೆ.
• ಆಯಾಸ ಹಸಿವಿಲ್ಲದಿರುವುದು ತಲೆನೋವು ಜ್ವರ ಇವು ಮುಖ್ಯ ಲಕ್ಷಣಗಳು.
ಎಷ್ಟು ದಿನ ಇರಬಹುದು?
ಒಂದು ವಾರದಿಂದ ಮೂರು ವಾರದವರೆಗೂ ಇರಬಹುದು ಬೇರೇನೂ ಕಾಯಿಲೆ ಇಲ್ಲದಿದ್ದರೆ ತನಗೆ ತಾನೇ ಶಮನವಾಗುತ್ತದೆ.
ಕಾರಣಗಳು:
ಶ್ವಾಸ ನಾಳೆಗಳಲ್ಲಿ ಪ್ರವೇಶಿಸಿದ ಹಲವು ರೀತಿಯ ಸೂಕ್ಷ್ಮ ಜೀವಾಣುಗಳು ವೈರಸ್ ಗಳು ಶ್ವಾಸಕೋಶದಲ್ಲಿ ಒಕ್ಕೂ ಸೋಂಕು ಉಂಟುಮಾಡುತ್ತವೆ. ಶ್ವಾಸನಾಳದ ಪೊರೆಹಿಗ್ಗಿ ಉಸಿರಾಟದ ಮಾರ್ಗವನ್ನು ಕಿರಿದುಗೊಳಿಸುತ್ತದೆ ಹೊರಗೆ ಹೋಗಬೇಕಾದ ಶ್ಲೇಷ್ಮ ಅಲ್ಲೇ ಬಂದಿಯಾಗುತ್ತದೆ. ಅದನ್ನು ಹೊರಹಾಕುವಲ್ಲಿ ಕೆಮ್ಮು ಬಂದು ಆಯಾಸವಾಗುತ್ತದೆ.
ಗಂಭೀರತೆ:
ರೋಗ ಗಂಭೀರವಾದರೆ ಮಕ್ಕಳಿಗೂ ವೃದ್ಧರಿಗೂ ನ್ಯುಮೋನಿಯಾ ಆಗಬಹುದು.
ಮನೆ ಮದ್ದು:
• ಮನೆಯಲ್ಲಿ ಬೆಚ್ಚಗೆ ಇದ್ದು ವಿಶ್ರಾಂತಿ ತೆಗೆದುಕೊಳ್ಳುವುದು. ಬಿಸಿಬಿಸಿ ಪಾನೀಯಗಳನ್ನು ಸೇವಿಸಬೇಕು ಮುಕ್ತ ವಾಯು ಸಂಚಾರವಿರಬೇಕು.
• ಡಾಕ್ಟರನ್ನು ಕಾಣುವುದು: ಉಸಿರಾಟದಲ್ಲಿ ತೊಂದರೆ, ಕೆಮ್ಮಿದಾಗ ನೋವಾದರೆ. ರೋಗಿಯು ಚಿಕ್ಕ ಮಗು ಅಥವಾ ಅತಿ ವೃದ್ಧರಾಗಿದ್ದರೆ.
ಡಾಕ್ಟರ್ ಸಲಹೆ ಏನು?
ಶರೀರಕ್ಕೆ ಶ್ರಮವಾಗುವದಂತೆ ನೋಡಿಕೊಳ್ಳಬೇಕು ವಿಶ್ರಾಂತಿ ಅಗತ್ಯ ಇದರಿಂದ ಶ್ವಾಸಕೋಶಕ್ಕೆ ಸೋಂಕು ಹರಡದಂತೆ ಹಾಗೂ ನ್ಯುಮೋನಿಯಾಗಿ ಪರಿವರ್ತನೆ ಯಾಗದಂತೆ ತಡೆಯಬಹುದು.
ನಿಮೋನಿಯಾ ಆಗುವ ಸಂಭವವಿದ್ದಲ್ಲಿ ಆಂಟಿಬಯಾಟಿಕ್ಸ್ ಔಷಧಿಯನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
ಕೆಮ್ಮಿಗೆ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ.
ಎಚ್ಚರಿಕೆ:
• ಸಿಗರೇಟು ಬಿಡಿ ಸೇದುವುದನ್ನು ಸಂಪೂರ್ಣ ತ್ಯಜಿಸುವುದರ ಜೊತೆಗೆ ಅಂತಹ ವಾತಾವರಣದಲ್ಲಿಯೂ ಇರಬಾರದು.
• ಚಿಕ್ಕ ಮಕ್ಕಳು ವೃದ್ಧರು ಶೀತ ವಾತಾವರಣದಲ್ಲಿ ಮಲಗಬಾರದು.
• ನೆಗಡಿಯಾದವರ ಶ್ವಾಸಕೋಶ ಸೋಂಕುಳ್ಳವರ ಹತ್ತಿರ ಸುಳಿಯಬಾರದು.
• ಆಕ್ಯೂಟ್ ಬ್ರಾಂಕೈಟಿಸ್ ನಿಂದ ಅಂತಹ ದುಷ್ಪರಿಣಾಮವೇನು ಇಲ್ಲ.
ಕ್ರಾನಿಕ್ ಬ್ರಾಂಕೈಟೀಸ್:
ಶ್ವಾಸನಾಳಗಳು ಮುಚ್ಚಿ ಹೋಗುವುದರಿಂದ ಇದು ಉಂಟಾಗುತ್ತದೆ. ಉಸಿರಾಡಲು ಅನುಕೂಲವಾಗುವಂತಹ ಶ್ವಾಸನಾಳಗಳು ಶುದ್ಧವಾಗಿರಬೇಕು ಎಂದು ನೋಡಿಕೊಳ್ಳುವ ಶರೀರ ದ ಯಂತ್ರ ಕೆಲಸ ಮಾಡುವುದರಿಂದಲೂ ಉಂಟಾಗುತ್ತದೆ ಇದರಿಂದ ಶ್ವಾಸನಾಳಗಳು ಸಂಪೂರ್ಣ ಮುಚ್ಚಿ ಹೋಗುತ್ತವೆ.
ಈ ತೊಂದರೆಯಿಂದ ಶ್ವಾಸಕೋಶದಲ್ಲಿರುವ ಮೃದುವಾದ ಬ್ರಾಂಕಿಯೋಲ್ಸ್ ನಾಶವಾಗುತ್ತದೆ ಆಗ ಸುಸ್ಥಿತಿಯಲ್ಲಿರುವ ಬ್ರಾಂಕಿಯೋಲ್ಸ್ ಇವುಗಳ ಇಲ್ಲದಿರುವಿಕೆಯನ್ನು ಪೂರೈಸಲು ತಮ್ಮ ವ್ಯಾಪ್ತಿಗಿಂತಲೂ ಹೆಚ್ಚು ವ್ಯಾಪಿಸಿ ಅವು ಕೂಡ ಕಾರ್ಯ ನಿರ್ವಹಿಸಲಾಗದಂತಾಗುತ್ತದೆ ಇದರಿಂದ ರಕ್ತ ಚಲನೆಯ ಮೇಲೆ ಪ್ರಭಾವವಾಗಿ ಹೃದಯ ವೈಫಲ್ಯವಾಗಬಹುದು.
ಲಕ್ಷಣಗಳು :
• ಹೆಚ್ಚು ಕೆಮ್ಮು ಕಫದಿಂದ ಕೂಡಿರುತ್ತದೆ.
• ಉಸಿರು ಬೆಕ್ಕು ಕೂಗಿದಂತಹ ಶಬ್ದದೊಂದಿಗೆ ಇರುತ್ತೆ (ಗೊರಗೊರ ಶಬ್ದವು ಇರುತ್ತದೆ).
• ಯಾವುದಾದರೂ ಕೆಲಸ ಮಾಡಿದಾಗ ಸ್ವಲ್ಪ ದೂರ ನಡೆದಾಗ ಸುಸ್ತಾಗುತ್ತದೆ.
• ನಂತರದಲ್ಲಿ ವಿಶ್ರಾಂತಿ ಸ್ಥಿತಿಯಲ್ಲಿದ್ದಾಗಲೂ ಆಯಾಸವೆನಿಸುತ್ತದೆ.
• ಅವ್ಯಕ್ತ ನೋವು ಶೀತ ಮುಂತಾದವು ಎದೆಯಲ್ಲಿ ಉಂಟಾಗುತ್ತವೆ.
ಕಾರಣಗಳು :
• ವಿಷಯುಕ್ತ ವಾಯು- ಮುಖ್ಯವಾಗಿ ಸಲ್ಫರ್ ಡೈಆಕ್ಸೈಡ್ ತಯಾರಿಸುವ ಸ್ಥಳ ಕಾರ್ಖಾನೆಗಳ ಹತ್ತಿರ ವಾಸಿಸುವವರಿಗೆ ಜಾಸ್ತಿ.
• ಸಿಗರೇಟು, ಬಿಡಿ ಸೇದುವ ಅಭ್ಯಾಸ ಸೋಂಕನ್ನು ವೃದ್ಧಿಸುತ್ತದೆ.
ಕಾಂಪ್ಲಿಕೇಷನ್ಸ್ :
• ಬ್ರಾಂಕೈಟಿಸ್ ತೀವ್ರವಾದರೆ ಎಂಫೀಸೀಮಾ ಹೃದಯ ವೈಫಲ್ಯ, ನ್ಯೂಮೋನಿಯಾ ಆಗಬಹುದು.
• ಮನೆ ಮದ್ದು ಬೆಚ್ಚಗಿರುವ ಕೋಣೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಬಿಸಿ ವಾತಾವರಣದಿಂದ ಶೀತ ವಾತಾವರಣಕ್ಕೆ ಹೋಗಬಾರದು.
ಡಾಕ್ಟರ್ ಅನು ಸಂಪರ್ಕಿಸುವುದು :
• ಎರಡು ಮೂರು ವಾರಗಳಿಗೂ ಅಧಿಕ ಎಡಬಿಡದೆ ಕೆಮ್ಮು ಇದ್ದಾಗ.
• ಪ್ರತಿ ಚಳಿಗಾಲದಲ್ಲೂ ಕೆಮ್ಮು ಬರುತ್ತಿದ್ದರೆ ಡಾಕ್ಟರ್ ಕೆಮ್ಮಿಗೆ ಔಷಧಿ ಕೊಡುತ್ತಾರೆ ಆಂಟಿಬಯೋಟಿಕ್ಸ್ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ ಹಬೆ ತೆಗೆದುಕೊಳ್ಳಲು ಸಲಹೆ ನೀಡಬಹುದು.
ಮುನ್ನೆಚ್ಚರಿಕೆ ಕ್ರಮಗಳು :
• ಹೊಗೆ, ಧೂಳು ಇರುವ ವಾತಾವರಣದಿಂದ ದೂರವಿರುವುದು.
• ಧೂಮಪಾನ ಸಂಪೂರ್ಣ ನಿಲ್ಲಿಸಬೇಕು.
ನಿವಾರಣೋಪಾಯಗಳು :
ಬೀಡಿ ಸಿಗರೇಟ್ ಸೇದುವುದನ್ನು ಸಂಪೂರ್ಣವಾಗಿ ಬಿಡಬೇಕು. ಬ್ರಾಂಕೈಟಿಸ್ ನಿಂದ ನರಳುತ್ತಿರುವವರು ಧೂಮಪಾನಿಗಳಾಗಬಾರದು. ಹಾಗೂ ಧೂಮಪಾನಿಗಳು ವಿಸರ್ಜಿಸುವ ಹೊಗೆಯನ್ನು ಸೇವಿಸದಂತೆ ಎಚ್ಚರಿಕೆ ವಹಿಸಬೇಕು.
ಚೆನ್ನಾಗಿ ನೀರು ಕುಡಿಯುವುದು: ಸಾಕಷ್ಟು ನೀರನ್ನು ಕುಡಿಯಬೇಕು ಶ್ಲೇಷ್ಮ ತಿಳಿಯಾಗಿ ಹೊರಬರಲು ಸುಲಭವಾಗುತ್ತದೆ.
ಕಾಫಿ, ಮಧ್ಯಗಳಿಗೆ ಸಂಪೂರ್ಣ ವಿರಾಮ :
ಕಾಫಿ, ಆಲ್ಕೋಹಾಲ್ ಸೇವನೆ ನಿಲ್ಲಿಸಿ ಇವುಗಳ ಸೇವನೆಯಿಂದ ಪದೇ ಪದೇ ಮೂತ್ರ ವಿಸರ್ಜನೆಯಾಗಿ ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ನೀರು ಸೇವಿಸುವ ಪ್ರಮಾಣಕ್ಕಿಂತ ಹೊರ ಹೋಗುವ ಮೂತ್ರದ ಪ್ರಮಾಣ ಜಾಸ್ತಿ ಆಗಿರುತ್ತದೆ.
ಹಬೆ ತೆಗೆದುಕೊಳ್ಳಬೇಕು :
ಎದೆ ಗಂಟಲಲ್ಲಿ ಕಫ ಗಟ್ಟಿಯಾಗಿ ಶೇಖರಣೆ ಯಾಗಿರುವಾಗ ಬಿಸಿ ಹಬೆಯನ್ನು ತೆಗೆದುಕೊಳ್ಳುವುದರಿಂದ ಕಫ ಕರಗಿ ನೀರಾಗುತ್ತದೆ ಹಬೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು ತೆಗೆದುಕೊಳ್ಳಬೇಕು.
ಇನ್ಹೇಲರ್ ಗಳು ಪ್ರಯೋಜನವಿಲ್ಲ.
ಜ್ಞಾನ ತಪ್ಪುವುದು ಮೂರ್ಛೆ ಹೋಗುವುದು :
ಸ್ವಲ್ಪ ಸಮಯ ಜ್ಞಾನ ತಪ್ಪುವುದು ಯಾವ ವಯಸ್ಸಿನವರಿಗಾದರೂ ಸಹಜವೇ ಅಕಸ್ಮಾತಾಗಿ ಮೆದುಳಿಗೆ ರಕ್ತದ ಸರಬರಾಜು ಏರುಪೇರಾದಾಗ ಹೀಗೆ ಆಗುವುದುಂಟು ಉದಾಹರಣೆಗೆ ಆಘಾತಕಾರಿ ಮಾತನ್ನು ಕೇಳಿದಾಗ ಬಹಳ ಸಮಯ ಒಂದೇ ಕಡೆ ಅಲ್ಲಾಡದೆ ನಿಂತಿದ್ದಾಗ ಹೀಗೆ ಆಗುವ ಸಾಧ್ಯತೆ ಇದೆ.
ಮುನ್ಸೂಚನೆಗಳು :
• ಯಾರಾದರೂ ತಲೆ ತಿರುಗುತ್ತಿದೆ ಕಣ್ಣು ಕತ್ತಲು ಕವಿಯುತ್ತಿದೆ ಎಂದರೆ ವಾಂತಿ ಬರುವಂತಿದೆ ಎಂದಾಗ,
• ಶರೀರವಾಲಿದಂತಾದಾಗ,
• ಬೆವರುತ್ತಿದ್ದರೆ,
• ಇಂತಹ ಸಂದರ್ಭಗಳಲ್ಲಿ ಆ ವ್ಯಕ್ತಿ ಮೂರ್ಛೆ ಹೋಗಬಹುದು ಎಂದರ್ಥ.
ಯಾರಾದರೂ ಮೂರ್ಚೆ ಹೋಗಬಹುದೆಂದೆನಿಸಿದಾಗ ಏನು ಮಾಡಬೇಕು?
• ಅವರು ಬಿದ್ದು ಹೋಗದಂತೆ ಹಿಡಿದುಕೊಳ್ಳಬೇಕು
• ಅವರನ್ನು ಬೆನ್ನ ಮೇಲೆ ಮಲಗಿಸಿ ಕಾಲ ಕೆಳಗೆ 8:12 ಅಂಗುಲ ಎತ್ತರವಿರುವ ದಿಂಬು ಇತ್ಯಾದಿ ಇಡಬೇಕು.
• ಬಿಗಿ ಉಡುಪುಗಳನ್ನು ಸಡಿಲಿಸಿ ಗಾಳಿ ಬೀಸಬೇಕು.
• ಮೃದುವಾದ ಒದ್ದೆ ಬಟ್ಟೆಯನ್ನು ಹಣೆಯ ಮೇಲೆ ಹಾಕಬೇಕು.
• ಅವರು ಸಮೀಪವಿದ್ದು ಬೀಳುತ್ತಾರೆ ಎಂದಾಗ ಈ ರೀತಿ ಮಾಡಬೇಕು ಒಂದು ವೇಳೆ ಮೊದಲೇ ಜ್ಞಾನ ತಪ್ಪಿ ಬಿದ್ದಿದ್ದರೆ ಉಸಿರಾಡುತ್ತಿದ್ದಾರೋ ಇಲ್ಲವೋ ಎಂದು ನೋಡಬೇಕು (ಮೂಗಿನ ಹತ್ತಿರ ಕೈ ಇಟ್ಟು) ಎದೆ ಬಡಿತ ನೋಡುವುದು ಉತ್ತಮ.
• ಬಿದ್ದಿದ್ದರೆ ಏನಾದರೂ ಗಾಯವಾಗಿದೆಯಾ ನೋಡಿ.
• ತಲೆಗೆ ಗಾಯವಾಗಿದ್ದರೆ ಕಾಲ ಕೆಳಗೆ 10-12 ಅಂಗೂಲ ಎತ್ತರದ ವಸ್ತುವನ್ನು ಇಡಿ ಆಗ ಮೆದುಳಿಗೆ ರಕ್ತ ಸಂಚಾರವಾಗಿ ಜ್ಞಾನ ಬರಬಹುದು.
• ಬಟ್ಟೆಗಳನ್ನು ಸಡಿಲ ಮಾಡಿ ಶರ್ಟಿನ ಗುಂಡಿಗಳನ್ನು ತೆಗೆದುಬಿಡಬೇಕು ಬೆಲ್ಟ್ ಕಟ್ಟಿದರೆ ಅದನ್ನು ತೆಗೆದಿಡಿ ಗಾಳಿ ಹಾಡುವಂತೆ ಮಾಡಿ.
• ಮೃದುವಾದ ಒದ್ದೆ ಬಟ್ಟೆಯನ್ನು ನೆತ್ತಿಯ ಮೇಲೆ ಹಾಕಿರಿ.
ಡಾಕ್ಟರನ್ನು ಯಾವಾಗ ನೋಡಬೇಕು.
• ಬಿದ್ದ ವ್ಯಕ್ತಿ 40 ವರ್ಷದ ಮೇಲ್ಪಟ್ಟವರಾಗಿದ್ದರೆ.
• ಪದೇ ಪದೇ ಜ್ಞಾನ ತಪ್ಪು ತಿದ್ದರೆ.
• ನಾಲಕ್ಕು ಐದು ನಿಮಿಷಗಳಾದರೂ ಪ್ರಜ್ಞೆ ಬರದಿದ್ದರೆ.
• ಹಾಗೆ ಮೂರ್ಚೆ ಹೋಗುವುದಕ್ಕೆ ಯಾವ ಕಾರಣವೂ ಕಾಣಿಸದಿದ್ದರೆ.
• ಈ ಸಂದರ್ಭದಲ್ಲಿ ತಕ್ಷಣ ಡಾಕ್ಟರ್ ಅನ್ನು ಕಾಣಬೇಕು.
ಶ್ಲೇಷ್ಮವನ್ನು ತಿಳಿಯಾಗಿಸುವ ಕರೋಗಿಸುವ ಔಷಧಿಗಳು ಇಲ್ಲ ಇನ್ಹೇಲರ್ಸ್ ಉಪಯೋಗಿಸುವುದರಿಂದ ಏನೂ ಪ್ರಯೋಜನವಿಲ್ಲ ಇವೆಲ್ಲಕ್ಕಿಂತ ಹೇರಳವಾಗಿ ನೀರು ಕುಡಿಯುವುದೇ ಸೂಕ್ತ.
ಕೆಮ್ಮುವುದು ಒಳ್ಳೆಯದು :
ಒಳಗೆ ಕಫ ಇರುವಾಗ ಕೆಮ್ಮು ಬಂದರೆ ಕೆಮ್ಮುವುದನ್ನು ತಡೆಯುವುದಕ್ಕಿಂತ ಕೆಮ್ಮುವುದು ಒಳ್ಳೆಯದು. ಕೆಮ್ಮು ಕಫ ಹೊರಗೆ ಹಾಕುವುದು. ಶ್ವಾಸಕೋಶವನ್ನು ಶುಚಿಗೊಳಿಸಿದಂತಾಗುತ್ತದೆ. ಕಫ ಒಳಗೆ ಇದ್ದರೆ ಶ್ವಾಸಕೋಶಗಳು ನಾಶ ಹೊಂದುತ್ತವೆ ನಂತರ ನ್ಯೂಮೋನಿಯಾ ಸಾಧ್ಯತೆ ಇದೆ.
ಕೆಮ್ಮಿನ ಔಷಧಿ ಒಂದೇ ಸಮನೆ ಕೆಮ್ಮಿಯು ಕೂಡ ಕಫ ಹೊರ ಬಾರದಿದ್ದರೆ ಆಗ ಕೆಮ್ಮಿನ ಶಮನಕ್ಕಾಗಿ ಔಷದಿ ತೆಗೆದುಕೊಳ್ಳಬಹುದು.