ಮೈಸೂರು : ನೀರಿನಲ್ಲಿ ಜಲ ಸಮಾಧಿ ಆಗ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಸಹೋದರರು ಬಾಲಕನನ್ನು ಬದುಕಿಸಿ ತಾವೇ ಜಲಸಮಾಧಿ ಆಗಿರುವ ದುರಂತ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವರುಣಾ ನಾಲೆಯಲ್ಲಿ ಈ ದುರಂತ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಮುಳುಗ ತೊಡಗಿದ್ದಾನೆ. ಇದೇ ವೇಳೆಗೆ ನಾಲೆಯ ಮೇಲ್ಗಡೆ ನಡೆದುಕೊಂಡು ಬರುತ್ತಿದ್ದ ಸಹೋದರರು ಬಾಲಕ ಮುಳುಗುವುದನ್ನು ನೋಡಿ ಆತನ ರಕ್ಷಣೆಗೆ ನಾಲೆಗೆ ಹಾರಿದ್ದಾರೆ. ಮುಳುಗುತ್ತಿದ್ದ ಬಾಲಕನನ್ನು ನೀರಿನಿಂದ ಮೇಲೆತ್ತಿದ್ದಾರೆ. ಆದರೆ, ಈ ಸಹೋದರರು ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲು ಆಗದೆ ಜಲಸಮಾಧಿ ಆಗಿದ್ದಾರೆ.
ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರ ನವ ವಿವಾಹಿತ (25) ನಂದನ್ ಹಾಗೂ ಅವರ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟ ಸಹೋದರರು. ನಿನ್ನೆ ಸಂಜೆ ವರಣಾ ನಾಲೆಯಲ್ಲಿ ಈ ಘಟನೆ ನಡೆದಿದೆ. ನಾಲೆಯಲ್ಲಿ ಈಜಲು ತೆರೆಳಿದ್ದ ಬಾಲಕ ಮಂಜು, ನೀರಿನಲ್ಲಿ ಮುಳುಗುತ್ತಿದ್ದ.
ಈ ವೇಳೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಈ ಸಹೋದರರು ನೀರಿನಲ್ಲಿ ಮುಳುಗಿದ್ದವನನ್ನು ರಕ್ಷಿಸಲು ಮುಂದಾಗಿ ಬಾಲಕನನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಿ ಸುಸ್ತಾಗಿ ನೀರಿನಿಂದ ಮೇಲೆ ಬರಲಾಗದೆ ನಂದನ್, ರಾಕೇಶ್ ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.















