ಮನೆ ರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್​’ನ್ನು ಹೊಡೆದುರುಳಿಸಿ ಬಿಎಸ್’ಎಫ್

ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್​’ನ್ನು ಹೊಡೆದುರುಳಿಸಿ ಬಿಎಸ್’ಎಫ್

0

ಪಂಜಾಬ್(Panjab)​: ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್​’ನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಪಂಜಾಬ್​’ನ ಗುರುದಾಸ್’​ಪುರ್​’ದಲ್ಲಿ ಮಂಗಳವಾರ ರಾತ್ರಿ ಹೊಡೆದುರುಳಿಸಿದೆ.

ಚೀನಾ ನಿರ್ಮಿತ ಪಿಸ್ತೂಲ್‌ಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮೂಲಕ ತಿಳಿಸಿರುವ ಬಿಎಸ್​’ಎಫ್​​, 2023ರ ಜನವರಿ 17 ಮತ್ತು 18ರ ರಾತ್ರಿ ಗುರುದಾಸ್​ಪುರದ ಉಂಚ ತಕ್ಲಾ ಗ್ರಾಮದ ಹೊರವಲಯದಲ್ಲಿ ಬಿಎಸ್​ಎಫ್​ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಪಾಕಿಸ್ತಾನದ ಕಡೆಯಿಂದ ಸದ್ದು ಕೇಳಿಸಿದೆ. ಡ್ರೋನ್​​ ಸದ್ದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಎಸ್​ಎಫ್​ ಆ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯ ವೇಳೆ ಏನೋ ಒಂದು ವಸ್ತು ಈ ಪ್ರದೇಶದಲ್ಲಿ ಕೆಳಗೆ ಬಿದ್ದಿದೆ.

ವಸ್ತು ಬಿದ್ದ ಈ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಉಂಚ ತಕ್ಲಾ ಗ್ರಾಮದಲ್ಲಿ ಕೆಲವು ಮರದ ಬಾಕ್ಸ್​’ನಲ್ಲಿ ಪ್ಯಾಕೆಟ್​ಗಳು ಪತ್ತೆಯಾಗಿದೆ. ಪ್ಯಾಕೆಟ್​ ತೆರೆದಾಗ ಚೀನಾ ನಿರ್ಮಿತವಾದ 4 ಪಿಸ್ತೂಲ್​, 8 ಮ್ಯಾಗಜೀನ್​ ಮತ್ತು 47 ಗುಂಡುಗಳು ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನ200 ಯೂನಿಟ್ ಉಚಿತ ವಿದ್ಯುತ್ ಹೇಳಿಕೆಗೆ ಈಗಲೂ ಬದ್ದ: ಡಿಕೆಶಿ
ಮುಂದಿನ ಲೇಖನನ್ಯಾಯಾಲಯಗಳು, ನ್ಯಾಯಮಂಡಳಿಗಳು ವಿಕಿಪೀಡಿಯಾ ಮೇಲೆ ಅವಲಂಬಿತವಾಗಬಾರದು: ಸುಪ್ರೀಂ ಕೋರ್ಟ್ ಎಚ್ಚರಿಕೆ