ಮನೆ ರಾಜಕೀಯ ರಾಷ್ಟ್ರಾದ್ಯಂತ 4ಜಿ ಸೇವೆ ನೀಡಲು ಮುಂದಾದ ಬಿಎಸ್ ಎನ್ ಎಲ್:1.12 ಲಕ್ಷ ಟವರ್ ಅಳವಡಿಕೆ

ರಾಷ್ಟ್ರಾದ್ಯಂತ 4ಜಿ ಸೇವೆ ನೀಡಲು ಮುಂದಾದ ಬಿಎಸ್ ಎನ್ ಎಲ್:1.12 ಲಕ್ಷ ಟವರ್ ಅಳವಡಿಕೆ

0

ನವದೆಹಲಿ(New Delhi): ರಾಷ್ಟ್ರದಾದ್ಯಂತ 4ಜಿ ಟೆಲಿಕಾಂ ನೆಟ್‌ವರ್ಕ್‌ ಸೇವೆ ನೀಡಲು ಬಿಎಸ್‌ಎನ್‌ಎಲ್‌(BSNL) ಮುಂದಾಗಿದ್ದು, ಸುಮಾರು 1.12 ಲಕ್ಷ ಟವರ್‌(Tower)ಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಬುಧವಾರ ಮಾಹಿತಿ ನೀಡಿದ್ದು, ಶೀಘ್ರದಲ್ಲೇ 4ಜಿ ನೆಟ್‌ವರ್ಕ್‌ ಸೇವೆಗೆ ಲಭ್ಯವಿರಲಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಭಾರತೀಯ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಈ ನೆಟ್‌ವರ್ಕ್‌ಅನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ನಾವು 4ಜಿ ನೆಟ್‌ವರ್ಕ್‌ ಅನ್ನು ಅಭಿವೃದ್ಧಿ ಪಡಿಸಿರುವುದನ್ನು ವಿಶ್ವದಾದ್ಯಂತ ಶ್ಲಾಘಿಸಲಾಗುತ್ತಿದೆ. ಇದು ಕೋರ್‌ ನೆಟ್‌ವರ್ಕ್‌, ರೇಡಿಯೋ ನೆಟ್‌ವರ್ಕ್‌ ಒಳಗೊಂಡಂತೆ ಸುಸಜ್ಜಿತ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ’ ಎಂದು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.

‘ಬಿಎಸ್‌ಎನ್‌ಎಲ್‌ ಈ ಕೂಡಲೇ 6,000 ಟವರ್‌ಗಳನ್ನು ಅಳವಡಿಸಲಾಗುವುದು. ನಂತರ 6,000ಕ್ಕೂ ಹೆಚ್ಚು ಟವರ್‌ಗಳನ್ನು ಅಳವಡಿಸಲಾಗುವುದು. ಬಳಿಕ ಅಂತಿಮವಾಗಿ 4ಜಿ ನೆಟ್‌ವರ್ಕ್‌ ಸೇವೆಗೆ ರಾಷ್ಟ್ರದಾದ್ಯಂತ 1 ಲಕ್ಷ ಟವರ್‌ಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.

ರೈಲಿನೊಳಗೆ 4ಜಿ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಶ್ನಿಸಿದಾಗ, 5ಜಿ ನೆಟ್‌ವರ್ಕ್‌ ಲಭ್ಯವಿದ್ದರಷ್ಟೇ ರೈಲಿನೊಳಗೆ ಇಂಟರ್‌ನೆಟ್‌ ಸಂಪರ್ಕ ನೀಡಲು ಸಾಧ್ಯ. ರೈಲು 100 ಕಿ.ಮೀ. ವೇಗದಲ್ಲಿ ಚಲಿಸುವಾಗ 4ಜಿ ನೆಟ್‌ವರ್ಕ್‌ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಸಂಪರ್ಕ ಕಡಿತಗೊಳ್ಳುತ್ತದೆ ಎಂದರು.

ಹಿಂದಿನ ಲೇಖನವಿವಿಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ ಸಶಕ್ತಗೊಳಿಸಿ: ಪ್ರೊ.ಕೆ.ಎಸ್ ರಂಗಪ್ಪ ಸಲಹೆ
ಮುಂದಿನ ಲೇಖನಅಕ್ರಮವಾಗಿ ಚಿಪ್ಪು ಹಂದಿ ಮಾರಾಟ: ಇಬ್ಬರಿಗೆ ನ್ಯಾಯಾಂಗ ಬಂಧನ