ಚಿಕ್ಕಬಳ್ಳಾಪುರ: ಬಿಜೆಪಿಗೆ ಯಾರು ಅನಿವಾರ್ಯವಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬುದು ಕೇವಲ ಕೆಲ ಮಾಧ್ಯಮಗಳ ಸೃಷ್ಟಿ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಚಿಕ್ಕಬಳ್ಳಾಪುರ ನಗರಕ್ಕೆ ಬುಧವಾರ ಆಗಮಿಸಿದ್ದ ಅವರು ತಮ್ಮನ್ನು ಬೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನು ಕೂಡ ಪಕ್ಷದ ಎಲ್ಲಾ ಹುದ್ದೆಗಳಿಗೆ ಅರ್ಹ ಅಂತ ನಾನಾಗಿ ನಾನೇ ಹೇಳಿಕೊಳ್ಳುವುದಿಲ್ಲ. ನರೇಂದ್ರ ಮೋದಿ ಅವರ ಸಾಮರ್ಥ ಆಡಳಿತಕ್ಕೆ ಇಡೀ ದೇಶದ ಜನಮತ ಇದೆ ಎಂದರು.
ಈ ಬಾರಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸೀಟು ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ಗ್ಯಾರೆಂಟಿ ನಾನು ಕೊಡುತ್ತೇನೆಂದರು. ಯಡಿಯೂರಪ್ಪ ಹಿರಿಯ ನಾಯಕರು. ಅವರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.
ವಿರೋದ ಪಕ್ಷದ ನಾಯಕನ ಆಯ್ಜೆ ಹಾಗೂ ರಾಜ್ಯ ಅಧ್ಯಕ್ಷರ ನೇಮಕ ವಿಚಾರ ವರಿಷ್ಟರಿಗೆ ಬಿಟ್ಟ ವಿಚಾರ, ಈ ವಿಚಾರದಲ್ಲಿ ಅತುರ ನಮಗೆ ಇಲ್ಲ ಎಂದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ನೇಮಕ ವಿಳಂಬ ಆಗಿದಿಯೆ ಎಂದ ಪ್ರಶ್ನೆಗೆ ಹಾಗೇನು ಇಲ್ಲ ಎಂದರು.














