ನವದೆಹಲಿ(Newdelhi): ಬಿಜೆಪಿಯ ಹೊಸ ಸಂಸದಿಯ ಮಂಡಳಿಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸ್ಥಾನ ದೊರೆತಿದ್ದು, ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಕೈಬಿಡಲಾಗಿದೆ.
ಬಿಜೆಪಿಯ ಹೊಸ ಸಂಸದಿಯ ಮಂಡಳಿ ಒಟ್ಟು 11 ಜನ ಸದಸ್ಯರಿದ್ದು, ಇದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಕೂಡ ಇದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ನಾನಂದ ಸೊನೊವಾಲ್ ಅವರನ್ನು ನೂತನವಾಗಿ ಸೇರ್ಪಡೆ ಮಾಡಲಾಗಿದೆ.
ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರನ್ನು ಮಂಡಳಿಯಿಂದ ಕೈಬಿಡಲಾಗಿದೆ.
ಚುನಾವಣಾ ಸಮಿತಿಯಲ್ಲಿಯೂ ಬಿಎಸ್‌ವೈಗೆ ಸ್ಥಾನ
ಹೊಸ ಕೇಂದ್ರ ಚುನಾವಣಾ ಸಮಿತಿಯನ್ನೂ ಬಿಜೆಪಿ ಪ್ರಕಟಿಸಿದೆ. ಇದರಲ್ಲಿಯೂ ಕೂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಅವರಿಗೆ ಸ್ಥಾನವನ್ನು ನೀಡಲಾಗಿದೆ.
15 ಮಂದಿ ಸದಸ್ಯರ ಚುನಾವಣಾ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್,ಅಮಿತ್ ಶಾ ಅವರು ಇದ್ದಾರೆ.