ಮನೆ ಸುದ್ದಿ ಜಾಲ ಮೈಸೂರು ವಿವಿಯಲ್ಲಿ ಶ್ರೀಘ್ರದಲ್ಲೇ ‘ಬುದ್ಧ ಅಧ್ಯಯನ ಪೀಠ’ ಆರಂಭ

ಮೈಸೂರು ವಿವಿಯಲ್ಲಿ ಶ್ರೀಘ್ರದಲ್ಲೇ ‘ಬುದ್ಧ ಅಧ್ಯಯನ ಪೀಠ’ ಆರಂಭ

0

ಮೈಸೂರು (Mysuru)-ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಶೀಘ್ರದಲ್ಲೇ ಬುದ್ಧ ಅಧ್ಯಯನ ಪೀಠ ಆರಂಭವಾಗಲಿದೆ ಎಂದು ವಿವಿ ಕುಲಪತಿ ಪ್ರೊ.ಹೇಮಂತ್‌ ಕುಮಾರ್‌ ಹೇಳಿದ್ದಾರೆ.

ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಒತ್ತಾಸೆಯಂತೆ ಮೈಸೂರು ವಿವಿಯಲ್ಲಿ ಶೀಘ್ರದಲ್ಲಿ ಬುದ್ಧ ಅಧ್ಯಯನ ಪೀಠ ಆರಂಭವಾಗಲಿದೆ.

ಸೋಮವಾರ ಬುದ್ಧ ಪೂಣಿ೯ಮೆ ಅಂಗವಾಗಿ “ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಬುದ್ಧನ ವಿಚಾರಧಾರೆಗಳ ಕುರಿತು ಮಾತನಾಡುತ್ತ ಶ್ರೀನಿವಾಸ ಪ್ರಸಾದ್‌ ಅವರು, ಮೈಸೂರು ವಿ.ವಿ.ಯಲ್ಲಿ ಬುದ್ಧ ಅಧ್ಯಯನ ಪೀಠ ಪ್ರಾರಂಭವಾಗಬೇಕಿದೆ. ಅದನ್ನ ವೇದಿಕೆಯಲ್ಲಿರುವ  ಪ್ರೊ. ಹೇಮಂತ್ ಕುಮಾರ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಬೇಕು. ಕುಲ ಸಚಿವರು ವಿ.ವಿ.ಯಲ್ಲಿ ಮೊದಲು ಜಾಗ ನೀಡಲಿ ನಂತರ ಮುಂದಿನದನ್ನ ನಾನು ಸಕಾ೯ರದ ಜೊತೆ ಮಾತನಾಡುತ್ತೇನೆ ಎಂದಿದ್ದರು.

ಪ್ರೊ.ಹೇಮಂತ್ ಕುಮಾರ್ ಅವರು  ಮಾತನಾಡುತ್ತಾ, ಪ್ರಸಾದರ ಒತ್ತಾಸೆಯಂತೆ ಮೈಸೂರು ವಿವಿಯಲ್ಲಿ ಬುದ್ಧ ಅಧ್ಯಯನ ಪೀಠ ಆರಂಭಿಸಲು ಒಪ್ಪಿಗೆ ಸೂಚಿಸಿ ಸ್ಥಳ ನೀಡುವ ಭರವಸೆ ನೀಡಿದರು.

ಹಿರಿಯ ಮುತ್ಸದ್ಧಿ ವಿ.ಶ್ರೀನಿವಾಸ ಪ್ರಸಾದ್ ಅವರ ಆಜ್ಞೆಯಂತೆ ಅಂದು ಮೈಸೂರು ವಿ.ವಿ.ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಪ್ರಾರಂಭವಾಗಿತ್ತು. ಈಗ ಬುದ್ದ ಅಧ್ಯಯನ ಪೀಠ ಶ್ರೀಘ್ರದಲ್ಲೇ ಆರಂಭವಾಗಲಿದೆ.