ಮನೆ ರಾಷ್ಟ್ರೀಯ ಬಜೆಟ್‌-2024 : ದೇಶದ ಜನರಿಗೆ ನಿರ್ಮಲಾ ಸೀತಾರಾಮನ್ ಭರ್ಜರಿ ಗಿಫ್ಟ್; ಬಜೆಟ್‌ ಹೈಲೇಟ್ಸ್‌

ಬಜೆಟ್‌-2024 : ದೇಶದ ಜನರಿಗೆ ನಿರ್ಮಲಾ ಸೀತಾರಾಮನ್ ಭರ್ಜರಿ ಗಿಫ್ಟ್; ಬಜೆಟ್‌ ಹೈಲೇಟ್ಸ್‌

0

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದೆ. 6 ಬಾರಿ ಪೂರ್ಣಾವಧಿ ಹಾಗೂ ಒಂದು ಬಾರಿ ಮಧ್ಯಂತರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ.

Join Our Whatsapp Group

ಬಜೆಟ್‌ ಪ್ರಮುಖ ಅಂಶಗಳು ಇಲ್ಲಿವೆ

* 1.52 ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲು

* ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ

* ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನ 5 ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ

* ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ

* ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ನೆರವು

* ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಣೆ

* ಉದ್ಯೋಗ, ಎಂಎಸ್‌ಎಂಇ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಹಲವು ಯೋಜನೆ

* ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ

* ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ

* ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು

* ಕೇಂದ್ರ ಬಜೆಟ್‌ನಲ್ಲಿ ಒಟ್ಟು 9 ಅಂಶಗಳಿಗೆ ಆದ್ಯತೆ

* ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆಗೆ ಆದ್ಯತೆ

* ‘ಪಿಎಂ ಸೂರ್ಯ ಘರ್’ ಯೋಜನೆ ಅಡಿ ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ

* 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ

* 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂ ತ ರೈಲ್ವೆ ಯೋಜನೆಗಳು

* ಬಿಹಾರದಲ್ಲಿ ರಸ್ತೆ ಅಭಿವೃದ್ದಿಗೆ 26 ಸಾವಿರ ಕೋಟಿ

* ಬೆಂಗಳೂರು – ಹೈದರಾಬಾದ್ ಹೆದ್ದಾರಿ ಅಭಿವೃದ್ದಿ ಯೋಜನೆ

* ಪ್ರಧಾನ ಮಂತ್ರಿ ಆವಾಸ್ ಯೋಜಹನೆ ಅಡಿ ದೇಶಾದ್ಯಂತ ಮೂರು ಕೋಟಿ ಹೊಸ ಮನೆಗಳ ನಿರ್ಮಾಣ.

* ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ವಿಶೇಷ ಅನುದಾನದ ಭರವಸೆ

* ಆಂಧ್ರ ಪ್ರದೇಶಕ್ಕೆ ಪುನರ್ ನಿರ್ಮಾಣ ಮನವಿಗೆ ಕೇಂದ್ರದ ಅಸ್ತು

* ಬಿಹಾರ ರಾಜ್ಯದ ಅಭಿವೃದ್ಧಿಗೂ ಹೊಸ ಯೋಜನೆ.