ಮನೆ ರಾಜ್ಯ 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್​​: ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ

4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್​​: ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್​​ ತನ್ನ ಗಾತ್ರದಲ್ಲೂ ದಾಖಲೆ ಮಾಡಿದೆ. 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಇದಾಗಿದೆ.

Join Our Whatsapp Group

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆಂದೇ 50,000 ಕೋಟಿ ರೂಗೂ ಹೆಚ್ಚು ಹಣವನ್ನು ಮೀಸಲಿರಿಸಲಾಗಿದೆ. ಅದರ ಜೊತೆ ಜೊತೆಗೆ ಇತರ ಅಭಿವೃದ್ದಿ ಯೋಜನೆಗಳಿಗೂ ಹಣದ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ರೂನಷ್ಟಿದೆ.

ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ ಮತ್ತು ಹಣ ಹರಿದುಬರುತ್ತದೆ, ಯಾವ್ಯಾವುದಕ್ಕೆ ಆ ಹಣ ವೆಚ್ಚವಾಗುತ್ತದೆ ಎನ್ನುವ ವಿವರ ಇಲ್ಲಿದೆ…

ಕರ್ನಾಟಕ ಬಜೆಟ್ 2025-26 ವಿವರ

ಒಟ್ಟು ಬಜೆಟ್ ಗಾತ್ರ: 4,09,549 ಕೋಟಿ ರೂ

ಒಟ್ಟು ಆದಾಯ (ಸ್ವೀಕೃತಿ): 4,08,647 ಕೋಟಿ ರೂ

ರಾಜಸ್ವ ಸ್ವೀಕೃತಿ (ರೆವಿನ್ಯೂ ರೆಸಿಪ್ಟ್): 2,92,477 ಕೋಟಿ ರೂ

ಬಂಡವಾಳ ಸ್ವೀಕೃತಿ (ಕ್ಯಾಪಿಟಲ್ ರೆಸಿಪ್ಟ್): 1,16,170 ಕೋಟಿ ರೂ

ಒಟ್ಟು ವ್ಯಯ (ಎಕ್ಸ್​​ಪೆಂಡಿಚರ್): 4,09,549 ಕೋಟಿ ರೂ

2025-26ರಲ್ಲಿ ರಾಜಸ್ವ ಸ್ವೀಕೃತಿ ವಿಂಗಡಣೆ:

ಒಟ್ಟು ರೆವಿನ್ಯೂ ರೆಸಿಪ್ಟ್: 2,92,477 ಕೋಟಿ ರೂ

ರಾಜ್ಯದ ಸ್ವಂತ ತೆರಿಗೆ ಆದಾಯ: 2,08,100 ಕೋಟಿ ರೂ

ಕೇಂದ್ರದಿಂದ ಸಿಗುವ ತೆರಿಗೆ ಪಾಲು: 67,877 ಕೋಟಿ ರೂ

ತೆರಿಗೆಯೇತರ ಆದಾಯ: 16,500 ಕೋಟಿ ರೂ

ಬಂಡವಾಳ ಸ್ವೀಕೃತಿ: 1,16,170 ಕೋಟಿ ರೂ

ಸಾಲಗಳಿಂದ ಬರುವ ಒಟ್ಟು ಬಂಡವಾಳ: 1,16,000 ಕೋಟಿ ರೂ

ಸಾಲೇತರ ಬಂಡವಾಳ ಸ್ವೀಕೃತಿ: 170 ಕೋಟಿ ರೂ

2025-26ನೇ ಸಾಲಿಗೆ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳು

ವಾಣಿಜ್ಯ ತೆರಿಗೆ ಇಲಾಖೆಗೆ 1,20,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 28,000 ಕೋಟಿ ರೂ. ತೆರಿಗೆ ಗುರಿ

ಅಬಕಾರಿ ಇಲಾಖೆಗೆ 40,000 ಕೋಟಿ ರೂ. ಗುರಿ;

ಮೋಟಾರು ವಾಹನ ಇಲಾಖೆಗೆ 15,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 12,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ

ರಾಜ್ಯದ ಸಾಲ 7.64 ಲಕ್ಷ ಕೋಟಿ ರೂ

ಕರ್ನಾಟಕ ಮೊದಲಿಂದಲೂ ಹಣಕಾಸು ಶಿಸ್ತು ಬೆಳೆಸಿಕೊಂಡ ರಾಜ್ಯ. ಸಾಲ ಕೂಡ ತೀರಾ ಹೆಚ್ಚಿಲ್ಲ. ಬಜೆಟ್​​ನಲ್ಲಿ ಘೋಷಿಸಿದ ಪ್ರಕಾರ ಕರ್ನಾಟಕದ ಸಾಲ 7,64,655 ಕೋಟಿ ರೂ ಇದೆ. ಇದು ರಾಜ್ಯ ಜಿಡಿಪಿಯ ಶೇ. 24.91ರಷ್ಟಿದೆ.

ರಾಜಸ್ವ ಕೊರತೆ ಅಥವಾ ರೆವಿನ್ಯೂ ಡೆಫಿಸಿಟ್ 19,262 ಕೋಟಿ ರೂ ಇದೆ. ಇದು ಜಿಡಿಪಿಯ ಶೇ 0.63ರಷ್ಟಾಗುತ್ತದೆ. ಇನ್ನು, ವಿತ್ತೀಯ ಕೊರತೆ ಅಥವಾ ಫಿಸ್ಕಲ್ ಡೆಫಿಸಿಟ್ 90,428 ಕೋಟಿ ರೂನಷ್ಟಾಗುತ್ತದೆ. ಇದು ಜಿಡಿಪಿಯ ಶೇ. 2.95ರಷ್ಟಾಗುತ್ತದೆ.