ಪಿರಿಯಾಪಟ್ಟಣ : ತಾಲ್ಲೂಕಿನ ಮಾಲಂಗಿ ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ ವತಿಯಿಂದ ಗ್ರಾಮಕ್ಕೆ ಸಂಬಂಧಿಸಿದ ಆಯವ್ಯಯ ಸಭೆಯನ್ನು ನಡೆಸಿ, ಗ್ರಾಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅದರ ಪರಿಹಾರ ಕೆಲಸ ಕಾರ್ಯಗಳ ಬಗ್ಗೆ ಕೆರೆ ಸಂರಕ್ಷಣೆ, ಅರಣ್ಯೀಕರಣ ಸೇರಿದಂತೆ ಮತ್ತಿತರ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಪಿ.ಎಲ್.ರಾಮಣ್ಣ ಮಾತನಾಡಿ ಗ್ರಾಮ ಅರಣ್ಯ ಸಮಿತಿಯ ರಚನೆಯು ಗ್ರಾಮದ ಅಭಿವೃದ್ಧಿ ಹಾಗೂ ಅರಣ್ಯ ಸಂರಕ್ಷಣೆಗೆ ಸಹಕಾರಿಯಾಗುವ ಮೂಲಕ ಸಮಾಜ ಸೇವೆಗೆ ತುಂಬಾ ಸಹಕಾರಿಯಾಗಲಿದೆ ಎಂದರು
ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಎಂ.ಎಸ್.ಹರೀಶ್ ಮಾತನಾಡಿ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಮುಕ್ತವಾಗಿ ಗ್ರಾಮಕ್ಕೆ ಅನುಕೂಲ ಮಾಡಿಕೊಡವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹಾಗೂ ಅರಣ್ಯ ರಕ್ಷಣೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಇದಕ್ಕೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೂ ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಆದ್ದರಿಂದ ಎಲ್ಲರೂ ಸಹಕರ ನೀಡಬೇಕು ಎಂದರು
ಈ ಸಭೆಯಲ್ಲಿ ಆಯವ್ಯಯ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಸಮಿತಿಯಿಂದ ಪಡೆದು ಸುಗಮದಾರರಾದ ಸುನಂದ್ ಕುಮಾರ್ ಹಾಗೂ ಗೋವಿಂದರಾಜು ಎಂಬುವವರಿಗೆ ಜವಾಬ್ದಾರಿಯಿಂದ ನಿರ್ವಹಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರಾದ ರೇವತಿ, ಮಮತಾ, ಸುಚಿತ್ರ, ಸುಮಾ, ರುಕ್ಮಿಣಿ, ವಿಶ್ವನಾಥ್, ಕಿರಣ್ ಕುಮಾರ್, ಶಂಕರೇಗೌಡ, ಆನಂದ್, ಕುಮಾರ್, ಅಣ್ಣಯ್ಯ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














