ಮನೆ ರಾಜಕೀಯ ಬಿಪಿಎಲ್‌ ಕಾರ್ಡುದಾರರಿಗೆ ಬಂಪರ್: 5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ

ಬಿಪಿಎಲ್‌ ಕಾರ್ಡುದಾರರಿಗೆ ಬಂಪರ್: 5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ

0

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿಯಾದ ಅಕ್ಕಿ ಭಾಗ್ಯಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಪ್ರತಿ ಬಿಪಿಎಲ್‌ ಕಾರ್ಡುದಾರರಿಗೂ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿತ್ತು. ಆದರೆ, ಸದ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿಯ ಜತೆಗೆ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಜುಲೈ 1 ರಿಂದಲೇ ಇದು ಜಾರಿಗೆ ಬರಲಿದೆ.

Join Our Whatsapp Group

5 ಕೆಜಿ ಅಕ್ಕಿಯ ಜತೆಗೆ ತಲಾ 1 ಕೆಜಿಗೆ 34 ರೂಪಾಯಿಯಂತೆ,  5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಹಿನ್ನೆಲೆ ಬಿಪಿಎಲ್‌ ಕಾರ್ಡುದಾರರಿಗೆ ಬಂಪರ್‌ ನೀಡಿದೆ ಸರ್ಕಾರ. ಸದ್ಯಕ್ಕೆ ಅಕ್ಕಿ ಕೊಡಲು ತೀರ್ಮಾನ ಮಾಡಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಆಹಾರ ಸಚಿವ ಮುನಿಯಪ್ಪ, ಬಿಪಿಎಲ್‌ ಕಾರ್ಡುದಾರರ ಅಕೌಂಟ್‌ಗೆ ಹಣ ಹಾಕ್ತೇವೆ. ಶೇ. 99 ರಷ್ಟು ಕಾರ್ಡ್‌ದಾರರ ಬಳಿ ಅಕೌಂಟ್ ಇದೆ. ಅವರ ಅಕೌಂಟ್‌ಗೆ ಪ್ರತಿಯೊಬ್ಬರಿಗೂ 170 ರೂ. ಹಣ ನೀಡಲಾಗುತ್ತದೆ, ಕುಟುಂಬದ ಕಾರ್ಡ್ ಹೋಲ್ಡರ್‌ ಅಕೌಂಟ್‌ಗೆ ಹಣ ಹೋಗುತ್ತದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಸಿಗುವ ತನಕ ಹಣ ನೀಡಲು ತೀರ್ಮಾನ ಮಾಡಲಾಗಿದೆ ಎಂದೂ ಅವರು ಹೇಳಿದರು.

ಈ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಸಹ ಮಾತನಾಡಿದ್ದು, 5 ಕೆಜಿಯ ಅಕ್ಕಿಯ ಜತೆಗೆ ಅಕ್ಕಿಯ ಹಣ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಎಂ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗಲ್ಲ ಎಂದಿದೆ. ನಾವು ಪುಕ್ಕಟೆ ಕೇಳ್ತಾ ಇಲ್ಲ, ಆದರೂ ಅವರು ರಾಜಕೀಯ ಮಾಡ್ತಿದ್ದಾರೆ. ಅಕ್ಕಿ ಕೊಡುವ ಕೆಲಸಕ್ಕೆ ಕಲ್ಲು ಹಾಕ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಈ ಮೂಲಕ ಅನ್ನ ಭಾಗ್ಯಕ್ಕೆ ಸದ್ಯಕ್ಕೆ ಪರಿಹಾರ ಸಿಕ್ಕಂತಾಗಿದ್ದು, ಜುಲೈ 1 ರಿಂದ 5 ಕೆಜಿ ಅಕ್ಕಿಯ ಜತೆಗೆ ಉಳಿದ 5 ಕೆಜಿ ಅಕ್ಕಿಗೆ ಬೇಕಾದ ಹಣವನ್ನೂ ನೀಡುತ್ತದೆ.

ರಾಜ್ಯ ಸರ್ಕಾರದ ಆರೋಪಕ್ಕೆ ಎಫ್‌ಸಿಐ ಈ ಹಿಂದೆಯೇ ಸ್ಪಷ್ಟನೆ ನೀಡಿತ್ತು. ಈ ಹಿಂದೆ ರಾಜ್ಯಗಳಿಗೆ ಹೆಚ್ಚುವರಿ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತಿದೆ. ಇದರ ನಡುವೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ, ಗೋಧಿ ಬೆಲೆ ಏರಿಕೆಯಾಗುತ್ತಿದೆ. ಬೆಲೆ ನಿಯಂತ್ರಿಸುವ ಅನಿವಾರ್ಯತೆ ಎದರಾಗಿದೆ.  ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಆಯಾ ರಾಜ್ಯಗಳಿಗೆ ನೀಡಬೇಕಿರುವ ಅಕ್ಕಿಯನ್ನು ಯಾವುದೇ ಕೊರತೆ ಇಲ್ಲದೆ ಕೇಂದ್ರ ನೀಡುತ್ತಿದೆ. 80 ಕೋಟಿ ಜನರು ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ 80 ಕೋಟಿ ಜನರ ಬಗ್ಗೆ ಯೋಚಿಸಬೇಕು. ಈ 80 ಕೋಟಿ ಜನರ ಆಹಾರ ಧಾನ್ಯ ಸರಬರಾಜಿನಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಿಯಮ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂದಿನ ಲೇಖನಸಂಸದ ಡಿ.ವಿ ಸದಾನಂದ ಗೌಡ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಲ್ಪ ದಿನ ಸುಮ್ಮನಿದ್ರೆ ಒಳ್ಳೇದು
ಮುಂದಿನ ಲೇಖನಕೇಂದ್ರ ಸರ್ಕಾರ: ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ ಕ್ವಿಂಟಾಲ್‌ಗೆ 10 ರೂ ಹೆಚ್ಚಳ