ಮನೆ ರಾಷ್ಟ್ರೀಯ ಕಾಂಗ್ರೆಸ್‌ ಸಂಸದನ ಸೀಟಿನಡಿ ನೋಟಿನ ಬಂಡಲ್ ಪತ್ತೆ: ತನಿಖೆಗೆ ಸ್ಪೀಕರ್ ಆದೇಶ

ಕಾಂಗ್ರೆಸ್‌ ಸಂಸದನ ಸೀಟಿನಡಿ ನೋಟಿನ ಬಂಡಲ್ ಪತ್ತೆ: ತನಿಖೆಗೆ ಸ್ಪೀಕರ್ ಆದೇಶ

0

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ವೇಳೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು ಕೂರುವ ಆಸನದಲ್ಲಿ ನೋಟುಗಳ ಬಂಡಲ್‌ ಗಳು ಪತ್ತೆಯಾದ್ದು, ಇದೀಗ ಸದನದಲ್ಲಿ ಕೋಲಾಹಲ ಉಂಟಾಗಿದೆ.

Join Our Whatsapp Group

ರಾಜ್ಯಸಭೆಯಲ್ಲಿ ದಿನನಿತ್ಯದ ತಪಾಸಣೆ ವೇಳೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ನೋಟಿನ ಕಂತೆಗಳು ಪತ್ತೆಯಾಗಿವೆ. ಈ ವಿಚಾರವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಗಮನಕ್ಕೆ ತರಲಾಗಿದ್ದು, ಈ ವಿಚಾರವಾಗಿ ಮಾತನಾಡಿದ ಅವರು ಇದೊಂದು ಗಂಭೀರ ವಿಷಯ ಎಂದು ತನಿಖೆಗೆ ಆದೇಶಿಸಿದ್ದಾರೆ.

ಗುರುವಾರ ಸದನವನ್ನು ಮುಂದೂಡಿದ ಬಳಿಕ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದು ಈ ವೇಳೆ ರಾಜ್ಯಸಭೆಯ ಸೀಟ್ ಸಂಖ್ಯೆ 222 ರಲ್ಲಿ ನಗದು ಪತ್ತೆಯಾಗಿದೆ ಎಂದು ಹೇಳಿದರು.” ಈ ಸ್ಥಾನವನ್ನು ತೆಲಂಗಾಣ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ನಿಯಮಾನುಸಾರ ತನಿಖೆ ನಡೆಯಬೇಕಿದೆ ಎಂದು ರಾಜ್ಯಸಭಾ ಅಧ್ಯಕ್ಷರು ಹೇಳಿದ್ದಾರೆ.

ಅಧ್ಯಕ್ಷರ ಹೇಳಿಕೆಗೆ ಖರ್ಗೆ ಆಕ್ರೋಶ:

ರಾಜ್ಯಸಭೆಯಲ್ಲಿ ಪತ್ತೆಯಾದ ನೋಟಿನ ಕಂತೆಗಳು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ಪತ್ತೆಯಾಗಿದ್ದು ಇದು ಗಂಭೀರ ವಿಚಾರ ಅಲ್ಲದೆ ಇದರ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೆ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಂಸದರ ಹೆಸರನ್ನು ಸಭಾಧ್ಯಕ್ಷರು ಹೆಸರಿಸುವುದು ಸರಿಯಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಆಸನ ಸಂಖ್ಯೆ ಮತ್ತು ಸಂಸದರ ಹೆಸರನ್ನು ಸೂಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲಿ ತಪ್ಪೇನಿದೆ, ಸಂಸತ್ತಿಗೆ ನೋಟುಗಳ ಕಂತೆಗಳನ್ನು ತರುವುದು ಸೂಕ್ತವೇ ? ಹಾಗಾಗಿ ಸೂಕ್ತ ತನಿಖೆಯಾಗಬೇಕು ಎಂದರು.

ನೋಟಿನ ಕಂತೆ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅಭಿಷೇಕ್ ಮನು ಸಿಂಘ್ವಿ ಆರೋಪವನ್ನು ತಳ್ಳಿಹಾಕಿದ್ದಾರೆ. “ನಾನು ರಾಜ್ಯಸಭೆಗೆ ಹೋಗುವಾಗ ಕೇವಲ 500 ರೂ. ನೋಟು ಮಾತ್ರ ತೆಗೆದುಕೊಂಡು ಹೋಗುತ್ತೇನೆ. ಆದರೆ ನನ್ನ ಆಸನದಲ್ಲಿ ಇಷ್ಟು ದೊಡ್ಡ ಮೊತ್ತದ ಕಂತೆ ಹೇಗೆ ಬಂತೆಂಬುದು ನನಗೆ ಗೊತ್ತಿಲ್ಲ, ಅಲ್ಲದೆ ಗುರುವಾರ ನಾನು 12.57 ಕ್ಕೆ ಸದನಕ್ಕೆ ಬಂದಿದ್ದು 1 ಗಂಟೆಗೆ ಸದನ ಆರಂಭವಾಗಿತ್ತು ಈ ವೇಳೆ ನಾನು ಮತ್ತು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್‌ ಗೆ ತೆರಳಿ ಊಟ ಮಾಡಿದೆ ಇದಾದ ಬಳಿಕ ನಾನು ಸಂಸತ್ ನಿಂದ ಹೊರ ನಡೆದೆ, ಹೀಗಿರುವಾಗ ನಾನು ಅಷ್ಟು ದೊಡ್ಡ ಮೊತ್ತವನ್ನು ಅಲ್ಲಿ ಬಿಡಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ.