ಮನೆ ರಾಜ್ಯ ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು – ಡಿಕೆಶಿ

ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು – ಡಿಕೆಶಿ

0

ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಧರ್ಮಸ್ಥಳ ಪ್ರಕರಣ ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಈಗ ಬುರುಡೆ ಗ್ಯಾಂಗ್‌ ಷಡ್ಯಂತ್ರದ ಕುರಿತು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆಯನ್ನ ದೆಹಲಿಗೆ ಎತ್ತಿಕೊಂಡು ಹೋಗಿದ್ದೂ ಗೊತ್ತು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು ಎಂದು ಬಾಂಬ್‌ ಸಿಡಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ. ರಾಜಕೀಯ ಯಾರೂ ಏನ್ ಬೇಕಾದರೂ ಮಾತಾಡಬಹುದು. ನಾನು ಮಾತಾಡಿದ್ರೆ ಸರ್ಕಾರದ ಹೇಳಿಕೆ ಆಗುತ್ತೆ. ಅಂತಿಮ ವರದಿ ಬರಲಿ, ಮಾತಾಡ್ತೀನಿ. ಹೋಮ್ ಮಿನಿಸ್ಟರ್, ಸಿಎಂ ಅಧಿಕೃತ ಸ್ಟೇಟ್ಮೆಂಟ್ ಮಾಡ್ತಾರೆ ಎಂದು ಹೇಳಿದ್ದಾರೆ.

ಮುಂದುವರಿದು… ಬುರುಡೆ ಡೆಲ್ಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತೂ, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದೂ ಗೊತ್ತು. ಪಿಐಎಲ್ ಹಾಕಿದ್ದು ಗೊತ್ತು, ಅಲ್ಲಿ ರಿಜೆಕ್ಟ್ ಆಗಿದ್ದು ಗೊತ್ತು. ಆದ್ರೆ ಪೊಲೀಸ್ ಇಲಾಖೆ ಅವರು ತನಿಖೆ ಮಾಡ್ತಿದ್ದಾರೆ, ವರದಿ ಕೊಡ್ತಾರೆ ಎಂದು ತಿಳಿಸಿದರು.

ಸುಪ್ರೀಂ ಆದೇಶ ಮುಚ್ಚಿಚ್ಚು ರಾಜ್ಯ ಸರ್ಕಾರವನ್ನೇ ಈ ಬುರುಡೆ ಗ್ಯಾಂಗ್‌ ಯಾಮಾರಿಸಿತ್ತು. ಅರ್ಜಿ ವಜಾಗೊಂಡಿದ್ದರೂ ಎಸ್‌ಐಟಿ ರಚನೆ ಮಾಡಿಸಿಕೊಂಡು ತನಿಖೆ ಮಾಡಿಸಿತ್ತು ಅನ್ನೋ ರಹಸ್ಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡುವುದಕ್ಕೆ ಮುನ್ನವೇ ಚಿನ್ನಯ್ಯನ ಮೂಲಕ ಬುರುಡೆ ಗ್ಯಾಂಗ್‌ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆದ್ರೆ ಮೇ 5ರಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ನ್ಯಾ.ಸತೀಶ್ ಚಂದ್ರ ನೇತೃತ್ವದ ಪೀಠ ಅರ್ಜಿ ವಜಾ ಮಾಡಿತ್ತು. ಆದ್ರೂ ಇದನ್ನ ಮುಚ್ಚಿಟ್ಟು ಬುರುಡೆ ಗ್ಯಾಂಗ್‌ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಎಸ್‌ಪಿಗೂ ದೂರು ನೀಡಲಾಗಿತ್ತು.