ಚಿಕ್ಕಬಳ್ಳಾಪುರ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಬೇಗೂರು ಜಂಕ್ಷನ್ ಬಳಿ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ 15 ಕಾರ್ಮಿಕರಿಗೆ ಗಾಯಗಳಾಗಿವೆ.
ಸಂಭವವಾದ ಅಪಘಾತದಲ್ಲಿ ಕೆಲವು ಕಾರ್ಮಿಕರು ಬಸ್ನ ಕೆಳಗೆ ಸಿಲುಕಿದ್ದರು. ತಕ್ಷಣವೇ ಕ್ರೇನ್ ಮೂಲಕ ಬಸ್ ಮೇಲೆತ್ತಿ ಗಾಯಾಳುಗಳನ್ನು ಹೊರತೆಗೆದು ಹತ್ತಿರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರ್ಮಿಕರನ್ನು ಊಟಕ್ಕಾಗಿ ಕರೆದೊಯ್ಯುವಾಗ ಈ ಅಪಘಾತ ಸಂಭವಿಸಿದ್ದು, ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














