ಮನೆ ರಾಷ್ಟ್ರೀಯ ಜಮ್ಮು ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಬಸ್: 21 ಜನರ ಸಾವು

ಜಮ್ಮು ಕಾಶ್ಮೀರದಲ್ಲಿ ಕಮರಿಗೆ ಉರುಳಿದ ಬಸ್: 21 ಜನರ ಸಾವು

0

ಶ್ರೀನಗರ: ಜಮ್ಮು ಕಾಶ್ಮೀರದ ಅಖ್ನೂರ್ ಪ್ರದೇಶದ ಜಮ್ಮು- ಪೂಂಚ್ ಹೆದ್ದಾರಿಯ ತಾಂಡಾ ಮೋರ್‌ನಲ್ಲಿ ಆಳವಾದ ಕಮರಿಗೆ ಬಸ್ ಉರುಳಿದ ಪರಿಣಾಮ 21 ಜನರು ಸಾವನ್ನಪ್ಪಿದ್ದು, ಸುಮಾರು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Join Our Whatsapp Group

ಉತ್ತರ ಪ್ರದೇಶದ ಹತ್ರಾಸ್‌ನಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಜಮ್ಮುವಿನ ಅಖ್ನೂರ್ ತಾಂಡಾ ಬಳಿ ಅಪಘಾತಕ್ಕೀಡಾಗಿದೆ. ಇಂದು ಜಮ್ಮು ರೈಲು ನಿಲ್ದಾಣದಲ್ಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನ ಇಂಜಿನ್ ಹಳಿತಪ್ಪಿದ ಕೆಲವೇ ಗಂಟೆಗಳ ನಂತರ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಬಸ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಿಂದ ಪ್ರಯಾಣಿಕರು ತೆರಳುತ್ತಿದ್ದರು. ಅವರು ಜಮ್ಮುವಿನಿಂದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇಗುಲಕ್ಕೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಜಮ್ಮು-ಪೂಂಚ್ ಹೆದ್ದಾರಿಯ ಕಾಳಿ ಧಾರ್ ಮಂದಿರದ ಬಳಿ ಬಸ್ ಕಮರಿಗೆ ಬಿದ್ದಿದೆ.

ಗಾಯಾಳುಗಳನ್ನು ಅಖ್ನೂರ್‌ನ ಸ್ಥಳೀಯ ಆಸ್ಪತ್ರೆಗೆ ಮತ್ತು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.

ಹಿಂದಿನ ಲೇಖನಪೆನ್ ಡ್ರೈವ್ ಹಂಚಿಕೆ ಪ್ರಕರಣ: ಇಬ್ಬರಿಗೆ ಜಾಮೀನು ಮಂಜೂರು- ಬೃಹತ್ ಪ್ರತಿಭಟನೆ
ಮುಂದಿನ ಲೇಖನತಂದೆ, ತಮ್ಮನನ್ನು ಕೊಂದು ತಲೆ ಮರೆಸಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿಯ ಬಂಧನ