ಪೇಶಾವರ, ಪಾಕಿಸ್ತಾನ: ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ನಡೆದಿದೆ.
ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯದ ದಿಯಾಮೇರ್ ಜಿಲ್ಲೆಯ ಕಾರಕೊರಂ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದು 15 ಜನ ಗಾಯಗೊಂಡಿದ್ದಾರೆ.
ನತದೃಷ್ಟ ಬಸ್ ರಾವಲ್ಪಿಂಡಿಯಿಂದ ಹುಂಜಾಗೆ ತೆರಳುತಿತ್ತು. ಕಾರಕೊರಂನ ಚಿಲ್ಲಾಸ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಣಿವೆಗೆ ಉರುಳಿತ್ತು.
ಘಟನೆಗೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯದ ಮುಖ್ಯಮಂತ್ರಿ ಹಾಜಿ ಗುಲ್ಬರ್ ಖಾನ್ ಅವರು ಚಿಲ್ಲಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿಯಾಗಿದ್ದಾರೆ.
Saval TV on YouTube