ಮನೆ ಅಪರಾಧ ಒಡಿಶಾದಲ್ಲಿ ಬಸ್ ಪಲ್ಟಿ: ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಒಡಿಶಾದಲ್ಲಿ ಬಸ್ ಪಲ್ಟಿ: ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

0

ಒಡಿಶಾದಲ್ಲಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ, 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Join Our Whatsapp Group

ಅಂಗುಲ್‌ನಿಂದ ಬರಿಪಾಡಾಗೆ ತೆರಳುತ್ತಿದ್ದ ಬಸ್ 50 ರಿಂದ 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ರಸ್ತೆಯಿಂದ ಸ್ಕಿಡ್ ಆಗಿದೆ. ಭಾನುವಾರ ಅಂಗುಲ್ ಜಿಲ್ಲೆಯ ಗಹಾಮ್ ಬಳಿ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿತ್ತು.

ಪೊಲೀಸರು ಮತ್ತು ಸ್ಥಳೀಯರ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಗಂಭೀರವಾಗಿ ಗಾಯಗೊಂಡಿರುವ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಅಪಘಾತಕ್ಕೆ ನಿಖರವಾದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ, ಚಾಲಕನು ವಾಹನದ ನಿಯಂತ್ರಣವನ್ನು ಕಳೆದುಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆ ಹೇಳುತ್ತಿದೆ.

ಸದ್ಯ ಪರಾರಿಯಾಗಿರುವ ಚಾಲಕನಿಗಾಗಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಭಾನುವಾರ ಮುಂಜಾನೆ, ಒಡಿಶಾದ ಸುವರ್ಣಪುರ ಜಿಲ್ಲೆಯಲ್ಲಿ ಪಿಕ್ ಅಪ್ ವ್ಯಾನ್ ಪಲ್ಟಿಯಾಗಿ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ . ಗಣರಾಜ್ಯೋತ್ಸವಕ್ಕೆ 10 ನೇ ತರಗತಿಯ 23 ವಿದ್ಯಾರ್ಥಿಗಳನ್ನು ಹೊತ್ತ ವ್ಯಾನ್ ಅಥಗಢ್‌ನ ಉತ್ತರ ಬಂಕಿ ಮಾಲಾ ಬಿಹಾರಪುರ ಸರ್ಕಾರಿ ಶಾಲೆಯಿಂದ ಸರಂದಾ ಮೈದಾನಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.