ಮನೆ ರಾಜ್ಯ ರಾಮನಗರ: ಅಂಡರ್ ಪಾಸ್’ನಲ್ಲಿ ಸಿಲುಕಿದ ಬಸ್, ನೆರವಿಗೆ ಧಾವಿಸಿದ ಸ್ಥಳೀಯರು

ರಾಮನಗರ: ಅಂಡರ್ ಪಾಸ್’ನಲ್ಲಿ ಸಿಲುಕಿದ ಬಸ್, ನೆರವಿಗೆ ಧಾವಿಸಿದ ಸ್ಥಳೀಯರು

0

ರಾಮನಗರ(Ramnagar):  ತಾಲ್ಲೂಕಿನ ಬಿಳಗುಂಬ ಅಂಡರ್ ಪಾಸ್ ನಲ್ಲಿ ಸೋಮವಾರ ಬೆಳಿಗ್ಗೆ ಖಾಸಗಿ ಬಸ್ ಒಂದು ಮಳೆ ನೀರಿನ ಪ್ರವಾಹಕ್ಕೆ ಸಿಲುಕಿದ್ದು, ಸ್ಥಳೀಯ ಗ್ರಾಮಸ್ಥರ ನೆರವಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.

ಉದಯರಂಗ ಹೆಸರಿನ ಈ ಬಸ್ ಬೆಂಗಳೂರಿನಿಂದ ಮಳವಳ್ಳಿಗೆ ಹೊರಟಿದ್ದು, ಬಸ್ ನಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಬಸ್ ನ ಅರ್ಧ ಮಟ್ಟಕ್ಕೆ ನೀರು ನಿಂತಿದ್ದು, ಮುಂದೆ ಚಲಿಸಲು ಸಾಧ್ಯವಾಗದೇ ಇದ್ದ ಪರಿಣಾಮ ನೆರವಿಗೆ ಧಾವಿಸಿದ ಸ್ಥಳೀಯರು ಪ್ರಯಾಣಿಕರನ್ನು  ಬಸ್ ನಿಂದ ಕೆಳಗಿಳಿಸಿದರು.

ರೈಲು ಸಂಚಾರ ಸ್ಥಗಿತ ಜಿಲ್ಲೆಯಾದ್ಯಂತ ಭಾನುವಾರ ಮಧ್ಯರಾತ್ರಿಯಿಂದ ಮಳೆ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ರೈಲು ನಿಲ್ದಾಣ ಪೂರ್ತಿ ಜಲಾವೃತಗೊಂಡಿದ್ದು, ಮೈಸೂರು- ಬೆಂಗಳೂರು ನಡುವೆ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಸಂಗನಬಸವನದೊಡ್ಡಿ ಬಳಿ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಬಸ್ ಹಾಗೂ ಕಾರುಗಳು ಮುಳುಗಿವೆ. ಇದರಿಂದಾಗಿ ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸಾಲು ಗಟ್ಟಿ ನಿಂತಿವೆ.

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಲೆ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಮನೆಗೆ ನೀರು ನುಗ್ಗಿದೆ. ಕೆರೆಗಳು ಕೋಡಿ ಬಿದ್ದಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.

ಹಿಂದಿನ ಲೇಖನಕರ್ನಾಟಕ ಲೋಕಸೇವಾ ಆಯೋಗದಿಂದ ಅರ್ಜಿ ಆಹ್ವಾನ
ಮುಂದಿನ ಲೇಖನಸಂಪಾಜೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ