ಮೈಸೂರು(Mysuru): ಉದ್ಯಮಿ ಶರತ್ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ನ ಅಧ್ಯಕ್ಷ ಅಪ್ಪಣ್ಣ ಬಂಧನಕ್ಕೆ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಶರತ್ ಕಚೇರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ನೇತೃತ್ವದ ನಿಯೋಗ ಭೇಟಿ ನೀಡಿತ್ತು. ಈ ವೇಳೆ ಶರತ್ ಸಹೋದರಿ ಬಳಿ ದೂರವಾಣಿ ಮೂಲಕ ಮಾತುಕತೆ ನಡೆಸಿದ ಯತೀಂದ್ರ ಸಿದ್ಧರಾಮಯ್ಯ, ಘಟನೆಯ ಸಂಪೂರ್ಣ ಮಾಹಿತಿ ಪಡೆದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಪ್ಪಣ್ಣ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಕೂಡಲೇ ಅವರನ್ನ ಬಂಧಿಸಬೇಕು ಮತ್ತು ಅಧ್ಯಕ್ಷ ಸ್ಥಾನಕ್ಕೆ ಅಪ್ಪಣ್ಣ ರಾಜೀನಾಮೆ ನೀಡಬೇಕು ಎದು ಒತ್ತಾಯಿಸಿದರು.
ಪ್ರವೀಣ್ ಮತ್ತು ಅಪ್ಪಣ್ಣ ರವರ ಮೋಸದಿಂದ ಶರತ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದ ಜೊತೆ ನಾವು ಇದ್ದೇವೆ ಎಂದು ಧೈರ್ಯ ತುಂಬಲು ಬಂದಿದ್ದೇವೆ. ಈ ಪ್ರಕರಣದಲ್ಲಿ ಅಪ್ಪಣ್ಣ ನವರ ಕೈವಾಡ ಇದೆ. ಬಿಜೆಪಿ ಸರ್ಕಾರ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಅಧ್ಯಕ್ಷ ಹುದ್ದೆಯಲ್ಲಿ ಅಪ್ಪಣ್ಣ ಇದ್ದಾರೆ. ಇದ್ದರಿಂದ ಪ್ರಕರಣದಲ್ಲಿ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ. ಇದ್ದರಿಂದ ಮೃತ ಪತ್ನಿ ಭಯಗೊಂಡು ಮನೆ ಖಾಲಿ ಮಾಡಿದ್ದಾರೆ. ಎಫ್ ಐ ಆರ್ ಮಾರ್ಚ್ ನಲ್ಲೆ ಆಗಿದೆ. ಈ ಕೂಡಲೇ ಅಪ್ಪಣ್ಣನ್ನು ಬಂಧಿಸಬೇಕು. ಪ್ರಾಮಾಣಿಕವಾಗಿ ಈ ಪ್ರಕರಣ ತನಿಖೆ ಆಗಬೇಕು. ಕೋರ್ಟ್ ಕೂಡ ಅವರ ನಿರೀಕ್ಷಾಣಾ ಜಮೀನು ವಜಾ ಮಾಡಿದೆ. ಅಪ್ಪಣ್ಣನ್ನು ಜಂಗಲ್ ಲಾಡ್ಜ್ ರೆಸಾರ್ಟ್ ಅಧ್ಯಕ್ಷ ಸ್ಥಾನದಿಂದ ಕೈ ಬಿಡಬೇಕು. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.